Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಡ ಕುಟುಂಬಗಳಿಗೆ 15 ಲಕ್ಷ ನಿವೇಶನ ವಿತರಣೆ; ರೈತರಿಗೆ ನಮೂನೆ 16ಎ ಪಹಣಿ: ಡಾ. ಜಿ. ಪರಮೇಶ್ವರ್

By ANU News
November 22, 2026 1 Min Read
Comments Off on ಬಡ ಕುಟುಂಬಗಳಿಗೆ 15 ಲಕ್ಷ ನಿವೇಶನ ವಿತರಣೆ; ರೈತರಿಗೆ ನಮೂನೆ 16ಎ ಪಹಣಿ: ಡಾ. ಜಿ. ಪರಮೇಶ್ವರ್

ಕೊರಟಗೆರೆ: ರಾಜ್ಯಾದ್ಯಂತ ನಿವೇಶನರಹಿತ ಬಡ ಕುಟುಂಬಗಳಿಗೆ 15 ಲಕ್ಷ ನಿವೇಶನಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ 20×30 ಅಡಿ ಬದಲಿಗೆ 30×40 ಅಡಿ ಅಳತೆಯ ನಿವೇಶನಗಳನ್ನು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಈಗಾಗಲೇ 20 ಸಾವಿರ ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಗ್ರಾಮಸಭೆಗಳ ಮೂಲಕ ಅರ್ಹ ಕುಟುಂಬಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ರೈತರಿಗೆ ಭೂಮಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒಂದೇ ದಾಖಲೆಯಲ್ಲಿ ಒದಗಿಸುವ ಉದ್ದೇಶದಿಂದ ‘ನಮೂನೆ 16ಎ’ ಪಹಣಿ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ರೈತರ ವಿವರ, ಬೆಳೆ ಮಾಹಿತಿ, ಆಧಾರ್ ಮಾಹಿತಿ ಮತ್ತು ಭಾವಚಿತ್ರ ಸೇರಿದಂತೆ ಭೂಮಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಲಭ್ಯವಾಗಲಿವೆ. ಇದರಿಂದ ಭೂದಾಖಲೆಗಳಿಗಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಹೇಳಿದರು.

ಬರದಿಂದ ₹62 ಸಾವಿರ ಕೋಟಿ ನಷ್ಟ

ರಾಜ್ಯದಲ್ಲಿ ಬರದಿಂದ ಸುಮಾರು ₹62 ಸಾವಿರ ಕೋಟಿ ನಷ್ಟವಾಗಿದ್ದು, ಈ ವರ್ಷ ಶೇ.80ರಷ್ಟು ಬೆಳೆ ಬಂದಿಲ್ಲ. ಬರಪೀಡಿತ ಪ್ರದೇಶಗಳ ಅರ್ಹ ರೈತರಿಗೆ ಒಟ್ಟು ₹5,000 ಪರಿಹಾರ ನೀಡಲು ಘೋಷಿಸಲಾಗಿದೆ. ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ತುಮಕೂರು ಜಿಲ್ಲೆಯ ರೈತರಿಗೆ ಪರಿಹಾರ ಬಿಡುಗಡೆ ಕಾರ್ಯ ಇಂದಿನಿಂದ ಆರಂಭವಾಗಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು ₹22 ಸಾವಿರ ಕೋಟಿ ನೆರವು ಕೋರಲಾಗಿದೆ ಎಂದು ತಿಳಿಸಿದರು.

ಕೊರಟಗೆರೆ ಕ್ಷೇತ್ರದ ಜನರ ಆಶೀರ್ವಾದದಿಂದ ಎರಡು ಬಾರಿ ಉಪಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಈ ಭಾಗದ ಜನರು ನೀಡಿರುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ರಸ್ತೆ ಮತ್ತು ಉದ್ಯೋಗ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದೇ ಸರ್ಕಾರದ ಉದ್ದೇಶ ಎಂದು ಡಾ. ಪರಮೇಶ್ವರ್ ತಿಳಿಸಿದರು.

Author

ANU News

Follow Me
Other Articles
Previous

Karnataka: Bantwal Govt Hospital Achieves Milestone with First Hip Replacement Surgery

Next

Karnataka to Distribute 15 Lakh Housing Sites to Poor Families; Parameshwara

Recent Posts

  • Karnataka to Distribute 15 Lakh Housing Sites to Poor Families; Parameshwara
  • ಬಡ ಕುಟುಂಬಗಳಿಗೆ 15 ಲಕ್ಷ ನಿವೇಶನ ವಿತರಣೆ; ರೈತರಿಗೆ ನಮೂನೆ 16ಎ ಪಹಣಿ: ಡಾ. ಜಿ. ಪರಮೇಶ್ವರ್
  • Karnataka: Bantwal Govt Hospital Achieves Milestone with First Hip Replacement Surgery
  • Bengaluru Property Owners Get Four Schemes from BDA on Golden Jubilee
  • ಬಿಡಿಎ 50ನೇ ವರ್ಷದ ಸಂಭ್ರಮ: ಸಾರ್ವಜನಿಕರಿಗೆ ನಾಲ್ಕು ವಿಶೇಷ ಯೋಜನೆಗಳ ಕೊಡುಗೆ
Copyright 2026 — ANU News. All rights reserved. Blogsy WordPress Theme