Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಆಶಾ ಕಾರ್ಯಕರ್ತೆಯರ ರಣಕಹಳೆ; ಸಚಿವ ನರೇಂದ್ರಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ ಸ್ಫೋಟ

By ANU News
November 25, 2026 1 Min Read
Comments Off on ಆಶಾ ಕಾರ್ಯಕರ್ತೆಯರ ರಣಕಹಳೆ; ಸಚಿವ ನರೇಂದ್ರಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ ಸ್ಫೋಟ

ಬೆಂಗಳೂರು: AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಆಗಾಗ್ಗೆ ಮಳೆ ಸುರಿಯುತ್ತಿದ್ದರೂ ಸಂಕಷ್ಟವನ್ನೂ ಲೆಕ್ಕಿಸದೆ ಕಾರ್ಯಕರ್ತೆಯರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.

ಸಚಿವ ನರೇಂದ್ರಸ್ವಾಮಿ ಅವರ “ಆಶಾ ಕಾರ್ಯಕರ್ತೆಯರಿಗೆ ಕೇಳಿದಾಗೆಲ್ಲ ಕಂಠಿಹಾರ ಕೊಡೋಕಾಗುತ್ತಾ?” ಎಂಬ ಹೇಳಿಕೆಯನ್ನು ಖಂಡಿಸಿರುವ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, “ನಾವು ಯಾವುದೇ ಹಾರ ಕೇಳಿಲ್ಲ. ನಮ್ಮ ದುಡಿತಕ್ಕೆ ತಕ್ಕ ಪ್ರತಿಫಲ ಮತ್ತು ಸರ್ಕಾರ ನೀಡಿದ ಭರವಸೆಯ ಈಡೇರಿಕೆಯನ್ನು ಮಾತ್ರ ಕೇಳುತ್ತಿದ್ದೇವೆ. ದುಡಿಯುವ ಹೆಣ್ಣುಮಕ್ಕಳನ್ನು ಅವಮಾನಿಸುವುದು ಕೀಳು ಅಭಿರುಚಿಯ ಪರಮಾವಧಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಒಂಬತ್ತು ದಿನಗಳಿಂದ ಬಿಸಿಲು, ಮಳೆ, ಚಳಿಯನ್ನು ಎದುರಿಸುತ್ತಿರುವ ಕಾರ್ಯಕರ್ತೆಯರ ಬೇಡಿಕೆಗಳನ್ನು ಮುಖ್ಯಮಂತ್ರಿ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಬರಹಗಾರ್ತಿ ಡಾ. ವಸುಂಧರಾ ಭೂಪತಿ, KPRS ರಾಜ್ಯ ಮುಖಂಡ ಯಶವಂತ್ ಹಾಗೂ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಮನಮೋಹನ್ ಹೋರಾಟಕ್ಕೆ ಬೆಂಬಲ ಸೂಚಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿದರು. ನಿವೃತ್ತ ಉಪನ್ಯಾಸಕ ಪ್ರೊ. ಚಂದ್ರಶೇಖರ್ ತಾಳ್ಯ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

Author

ANU News

Follow Me
Other Articles
Previous

ದೆಹಲಿ ಕೆಫೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

Next

ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ಮತ್ತೆ ಇಬ್ಬರು ಅಸ್ವಸ್ಥ

Recent Posts

  • ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ಮತ್ತೆ ಇಬ್ಬರು ಅಸ್ವಸ್ಥ
  • ಆಶಾ ಕಾರ್ಯಕರ್ತೆಯರ ರಣಕಹಳೆ; ಸಚಿವ ನರೇಂದ್ರಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ ಸ್ಫೋಟ
  • ದೆಹಲಿ ಕೆಫೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
  • Three Arrested in Alleged Gang-Rape at Delhi Cafe; Two Women Among Accused
  • Supreme Court Cancels Vinay Kulkarni’s Bail in Yogeesh Gowda Murder Case
Copyright 2026 — ANU News. All rights reserved. Blogsy WordPress Theme