Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ದೇವಿರಮ್ಮನ ಬೆಟ್ಟದಲ್ಲಿ ಹಗ್ಗ ತುಂಡಾಗಿ ಅವಘಡ; 40ಕ್ಕೂ ಹೆಚ್ಚು ಮಂದಿಗೆ ಗಾಯ; ಭಕ್ತರ ನೆರವಿಗೆ ಧಾವಿಸಿದ ಡಾ.ರವಿ ಸಿ.ಟಿ.

By ANU News
November 8, 2026 1 Min Read
Comments Off on ದೇವಿರಮ್ಮನ ಬೆಟ್ಟದಲ್ಲಿ ಹಗ್ಗ ತುಂಡಾಗಿ ಅವಘಡ; 40ಕ್ಕೂ ಹೆಚ್ಚು ಮಂದಿಗೆ ಗಾಯ; ಭಕ್ತರ ನೆರವಿಗೆ ಧಾವಿಸಿದ ಡಾ.ರವಿ ಸಿ.ಟಿ.

ಚಿಕ್ಕಮಗಳೂರು: ದೇವಿರಮ್ಮನ ಬೆಟ್ಟದಲ್ಲಿ ಭಕ್ತರ ಸುರಕ್ಷತೆಗಾಗಿ ಕಟ್ಟಲಾಗಿದ್ದ ಹಗ್ಗ ತುಂಡಾದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಂಟು ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕುಟುಂಬಸ್ಥರಿಂದ ಘಟನೆಯ ವಿವರ ಪಡೆದುಕೊಂಡರು.

ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವು ಹೃದಯಾಘಾತದಿಂದ ಸಂಭವಿಸಿದ್ದು, ಹಗ್ಗ ತುಂಡಾಗಿ ಜನರು ಬಿದ್ದು ಗಾಯಗೊಂಡ ಘಟನೆಗೂ ಸಾವಿಗೂ ಸಂಬಂಧವಿಲ್ಲ ಎಂದು ಡಾ. ರವಿ ಸ್ಪಷ್ಟಪಡಿಸಿದರು.

ಬೆಟ್ಟದ ಭೌಗೋಳಿಕ ಸ್ವರೂಪದಿಂದಾಗಿ ಮುನ್ನೆಚ್ಚರಿಕೆಗಳ ನಡುವೆಯೂ ಇಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ಗಾಯಾಳುಗಳ ಚಿಕಿತ್ಸೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Author

ANU News

Follow Me
Other Articles
Previous

LK Advani Enters 100th Year; PM Modi Hails Veteran BJP Leader’s Political Legacy

Next

C T Ravi Assures Free Treatment for All Injured in Deviramma Hill Accident

Recent Posts

  • C T Ravi Assures Free Treatment for All Injured in Deviramma Hill Accident
  • ದೇವಿರಮ್ಮನ ಬೆಟ್ಟದಲ್ಲಿ ಹಗ್ಗ ತುಂಡಾಗಿ ಅವಘಡ; 40ಕ್ಕೂ ಹೆಚ್ಚು ಮಂದಿಗೆ ಗಾಯ; ಭಕ್ತರ ನೆರವಿಗೆ ಧಾವಿಸಿದ ಡಾ.ರವಿ ಸಿ.ಟಿ.
  • LK Advani Enters 100th Year; PM Modi Hails Veteran BJP Leader’s Political Legacy
  • ಎಲ್.ಕೆ. ಅಡ್ವಾಣಿ 100ನೇ ವರ್ಷಕ್ಕೆ ಪಾದಾರ್ಪಣೆ; ರಾಜಕೀಯ ಗುರುವಿನ ರಾಜಕೀಯ ಕೊಡುಗೆ, ರಾಷ್ಟ್ರಸೇವೆ ಮತ್ತು ಸೈದ್ಧಾಂತಿಕ ಬದ್ಧತೆ ಸ್ಮರಿಸಿದ ಪ್ರಧಾನಿ
  • ‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ
Copyright 2026 — ANU News. All rights reserved. Blogsy WordPress Theme