Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

MSMEಗಳಿಗೆ ಹಣಕಾಸು ಬಲ; SIDBIಯಿಂದ 71 ಹೊಸ ಶಾಖೆಗಳು, ECLGS 5.0 ಜಾರಿ: ಕೇಂದ್ರ

By ANU News
August 5, 2026 1 Min Read
0

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಸಾಲ ಸೌಲಭ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) 71 ಹೊಸ ಶಾಖೆಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ. ಜೊತೆಗೆ, ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS) 5.0 ಜಾರಿಗೊಳಿಸಲಾಗಿದೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಏಪ್ರಿಲ್ 2024ರಿಂದ ಜುಲೈ 2026ರವರೆಗೆ ಪ್ರಮುಖ MSME ಕ್ಲಸ್ಟರ್‌ಗಳಲ್ಲಿ SIDBI 71 ಹೊಸ ಶಾಖೆಗಳನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 31, 2026ರ ವೇಳೆಗೆ SIDBIಯ ನೇರ ಸಾಲ ಪೋರ್ಟ್‌ಫೋಲಿಯೊ ಶೇ.36.8ರಷ್ಟು ಏರಿಕೆ ಕಂಡು ₹51,687 ಕೋಟಿಗೆ ತಲುಪಿದ್ದು, ಮರುಹಣಕಾಸು (Refinance) ಪೋರ್ಟ್‌ಫೋಲಿಯೊ ಶೇ.16.9ರಷ್ಟು ಹೆಚ್ಚಳಿ ₹4.5 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಿಂದ ಬ್ಯಾಂಕುಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ ಸಾಲ ವಿತರಣೆ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದೆ.

ಇದರ ಜೊತೆಗೆ, NBFCಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೊಂದಿಗೆ ಸಹ-ಸಾಲ (Co-lending) ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಅನೌಪಚಾರಿಕ ಸೂಕ್ಷ್ಮ ಉದ್ಯಮಗಳಿಗಾಗಿ ‘ಪ್ರಯಾಸ್’ ಯೋಜನೆ ಆರಂಭಿಸಲಾಗಿದ್ದು, ಸಣ್ಣ ಉದ್ಯಮಗಳಿಗೆ ಇನ್‌ವಾಯ್ಸ್ ಆಧಾರಿತ ಡಿಜಿಟಲ್ ಸಾಲ ಒದಗಿಸಲು GST ಸಹಾಯ್ ಅಪ್ಲಿಕೇಶನ್ ಪರಿಚಯಿಸಲಾಗಿದೆ.

ಇನ್ನೊಂದೆಡೆ, ಮೇ 2026ರಲ್ಲಿ ಜಾರಿಗೆ ಬಂದಿರುವ ECLGS 5.0 ಯೋಜನೆಯಡಿ ಅರ್ಹ MSMEಗಳು ತಮ್ಮ ಗರಿಷ್ಠ ಕಾರ್ಯನಿರತ ಬಂಡವಾಳದ ಶೇ.20ರವರೆಗೆ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ. ಈ ಸಾಲಕ್ಕೆ ಶೇ.100ರಷ್ಟು ಕೇಂದ್ರ ಸರ್ಕಾರದ ಖಾತರಿ ದೊರೆಯಲಿದ್ದು, ಈ ಯೋಜನೆಯಿಂದ MSMEಗಳು, ಇತರೆ ಉದ್ಯಮಗಳು ಹಾಗೂ ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳಿಗೆ ಒಟ್ಟಾರೆ ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಹರಿವು ಉಂಟಾಗುವ ನಿರೀಕ್ಷೆಯಿದೆ.

Author

ANU News

Follow Me
Other Articles
Previous

Govt strengthens MSME financing: SIDBI opens 71 branches, launches expanded credit schemes

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • MSMEಗಳಿಗೆ ಹಣಕಾಸು ಬಲ; SIDBIಯಿಂದ 71 ಹೊಸ ಶಾಖೆಗಳು, ECLGS 5.0 ಜಾರಿ: ಕೇಂದ್ರ
    • Govt strengthens MSME financing: SIDBI opens 71 branches, launches expanded credit schemes
    • 2014ರಿಂದ 12,819 ಲಕ್ಷ ಮೆಟ್ರಿಕ್ ಟನ್ MSP ಬೆಳೆ ಖರೀದಿ; ರೈತರಿಗೆ ₹27.8 ಲಕ್ಷ ಕೋಟಿ ಪಾವತಿ: ಕೇಂದ್ರ
    • Govt procured 12,819 LMT of MSP crops since 2014; payouts touch ₹27.8 lakh crore
    • ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಹೊಸ ಆಯುಷ್ ಕಾಲೇಜು, ಆಸ್ಪತ್ರೆಗಳಿಗೆ ರಾಜ್ಯಗಳಿಗೆ ಕೇಂದ್ರದಿಂದ ಆರ್ಥಿಕ ನೆರವು
    Copyright 2026 — ANU News. All rights reserved. Blogsy WordPress Theme