Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ನನ್ನ ಪ್ರಿಯ RSS ಸ್ವಯಂಸೇವಕರೇ, ಕಾಯಿರಿ’ ಎಂದ ಪ್ರಿಯಾಂಕ್ ಖರ್ಗೆ

By ANU News
October 21, 2026 2 Min Read
0

ಬೆಂಗಳೂರು: ಆರ್‌ಎಸ್‌ಎಸ್‌ನ ಸ್ವಯಂಸೇವಕರು ಪಥಸಂಚಲನ ನಡೆಸಲು ಉದ್ದೇಶಿಸಿದ್ದರೆ, ನಿಗದಿತ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಅನುಮತಿ ಪಡೆಯುವವರೆಗೆ ಕಾಯಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಗೃಹ ಇಲಾಖೆಗೆ ಕೇವಲ ಮಾಹಿತಿ ನೀಡುವುದು ಅಥವಾ ಸಹಕಾರ ಕೋರಿದರೆ ಅದನ್ನು ಅಧಿಕೃತ ಅನುಮತಿ ಪಡೆದಂತೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಆರ್‌ಎಸ್‌ಎಸ್‌ನ ನನ್ನ ಪ್ರಿಯ ಸ್ವಯಂಸೇವಕರೇ, ದಸರಾ ಸಂಭ್ರಮ ಜೋರಾಗಿದೆ ಎಂದು ಭಾವಿಸುತ್ತೇನೆ. ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವ ಉದ್ದೇಶ ನನಗಿಲ್ಲ. ಆದರೆ, ಗೃಹ ಇಲಾಖೆಗೆ ಮಾಹಿತಿ ನೀಡುವುದು ಅಥವಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಕೋರುವುದು ಅಧಿಕೃತ ಅನುಮತಿಗೆ ಸಮನಲ್ಲ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಎಲ್ಲ ಸಂಘಟನೆಗಳಿಗೂ ಅನ್ವಯಿಸುವ ನಿಗದಿತ ಪ್ರಕ್ರಿಯೆಯಂತೆ ಅರ್ಜಿ ಸಲ್ಲಿಸಿ, ಅಗತ್ಯ ವಿವರಗಳನ್ನು ಒದಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ವರದಿ 2025–26’ರಲ್ಲಿ ಕರ್ನಾಟಕದಾದ್ಯಂತ 562 ಪಥಸಂಚಲನಗಳನ್ನು ನಡೆಸಲಾಗಿದ್ದು, ಅವುಗಳಲ್ಲಿ ಸಮವಸ್ತ್ರ ಧರಿಸಿದ 2,21,963 ಮಂದಿ ಭಾಗವಹಿಸಿದ್ದರು ಎಂದು ಉಲ್ಲೇಖಿಸಿರುವುದನ್ನು ಸಚಿವರು ಪ್ರಸ್ತಾಪಿಸಿದ್ದಾರೆ.

ಒಂದೇ ದಿನ, ಒಂದೇ ಸಮಯದಲ್ಲಿ ರಾಜ್ಯದ ವಿವಿಧೆಡೆ ದೊಡ್ಡ ಸಂಖ್ಯೆಯಲ್ಲಿ ಸ್ವಯಂಸೇವಕರು ಪಥಸಂಚಲನ ನಡೆಸಲು ಉದ್ದೇಶಿಸಿದರೆ, ಪೊಲೀಸ್ ಸಿಬ್ಬಂದಿ ನಿಯೋಜನೆ, ಸಂಚಾರ ನಿರ್ವಹಣೆ, ಭದ್ರತೆ, ಸಾರಿಗೆ ಮತ್ತು ಇತರ ಆಡಳಿತಾತ್ಮಕ ವ್ಯವಸ್ಥೆಗಳಿಗೆ ಸೂಕ್ತ ಸಿದ್ಧತೆ ಅಗತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಅಗತ್ಯವಾದ ಮಾನವಶಕ್ತಿ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮುಂಚಿತ ಯೋಜನೆ ಬೇಕು. ಆದ್ದರಿಂದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಧಿಕೃತ ಅನುಮತಿಗಾಗಿ ಕಾಯುವಂತೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. ಕೊನೆಯಲ್ಲಿ ದಸರಾ ಹಬ್ಬದ ಶುಭಾಶಯಗಳನ್ನೂ ತಿಳಿಸಿದ್ದಾರೆ.

My dearest Swayamsevaks of the RSS,

Hope the Dasara festivities are in full swing!

Not to be a wet blanket, but a gentle reminder, merely “informing” or telling the Home Department to “cooperate” or “make necessary arrangements” is not the same as obtaining permission.

Please submit your application in accordance with the prescribed procedure applicable to all organizations and await formal approval from the competent authorities.

I am sure you have read your own Akhil Bharatiya Pratinidhi Sabha Annual Report 2025–26, which states that the RSS conducted 562 route marches across Karnataka, involving 2,21,963 uniformed participants.

Now, when lakhs of you intend to march through Karnataka’s streets on single day at the same time, the Police Department has considerable preparations to make: deployment of personnel, transportation, food, traffic management, security arrangements and other logistics.

All of this requires planning, manpower and public resources.

So, please fill out the prescribed application form, provide the necessary details and await formal permission.

Happy Dasara!

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 20, 2026

Author

ANU News

Follow Me
Other Articles
Previous

ನಿರುದ್ಯೋಗ, ಬೆಲೆ ಏರಿಕೆಯೇ ಇಂದಿನ ಆಧುನಿಕ ರಾವಣ: ಪ್ರಿಯಾಂಕಾ ಗಾಂಧಿ

Next

‘India Belongs to All Communities’: Annamalai Backs Bhagwat’s Remarks

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘India Belongs to All Communities’: Annamalai Backs Bhagwat’s Remarks
    • ‘ನನ್ನ ಪ್ರಿಯ RSS ಸ್ವಯಂಸೇವಕರೇ, ಕಾಯಿರಿ’ ಎಂದ ಪ್ರಿಯಾಂಕ್ ಖರ್ಗೆ
    • ನಿರುದ್ಯೋಗ, ಬೆಲೆ ಏರಿಕೆಯೇ ಇಂದಿನ ಆಧುನಿಕ ರಾವಣ: ಪ್ರಿಯಾಂಕಾ ಗಾಂಧಿ
    • ಜಾಗತಿಕ ಆರ್ಥಿಕ ಮಂದಗತಿಯ ನಡುವೆಯೂ ಭಾರತದ ಆರ್ಥಿಕತೆ ವೇಗವಾಗಿ ಮುನ್ನಡೆ: ರಾಜನಾಥ್ ಸಿಂಗ್
    • ‘ಲ್ಯಾಂಡ್ ಜಿಹಾದ್’, ‘ಲವ್ ಜಿಹಾದ್’ ತಡೆಗೆ ಉತ್ತರಾಖಂಡದಲ್ಲಿ ಕಾನೂನು ಜಾರಿ: 200ಕ್ಕೂ ಹೆಚ್ಚು ಅಕ್ರಮ ಮದರಸಾಗಳಿಗೆ ಬೀಗ
    Copyright 2026 — ANU News. All rights reserved. Blogsy WordPress Theme