Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಭಾರತ-ಯುಎಇ ಬಾಂಧವ್ಯ ಬಲವರ್ಧನೆಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ: ಪ್ರಲ್ಹಾದ್ ಜೋಶಿ

By ANU News
November 21, 2026 1 Min Read
Comments Off on ಭಾರತ-ಯುಎಇ ಬಾಂಧವ್ಯ ಬಲವರ್ಧನೆಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ: ಪ್ರಲ್ಹಾದ್ ಜೋಶಿ

ದುಬೈ: ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಸಂಸ್ಕೃತಿ, ಮೌಲ್ಯಗಳು ಮತ್ತು ಕನಸುಗಳನ್ನು ಹೆಮ್ಮೆಯಿಂದ ಕೊಂಡೊಯ್ಯುವ ಅನಿವಾಸಿ ಭಾರತೀಯರನ್ನು ಭೇಟಿಯಾಗುವುದು ಸಂತಸದ ಕ್ಷಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ದುಬೈನಲ್ಲಿ ನಡೆದ ಭಾರತೀಯ ಸಮುದಾಯದ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿರುವುದು ವಿಶೇಷ ಸಂತಸ ತಂದಿದೆ ಎಂದರು.

ಭಾರತ ಮತ್ತು ಯುಎಇ ನಡುವಿನ ಸ್ನೇಹಸೇತುವೆಯನ್ನು ಗಟ್ಟಿಗೊಳಿಸುವಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ವೇಗದ ಬದಲಾವಣೆಗಳ ಕುರಿತು ಸಮಾರಂಭದಲ್ಲಿ ಮಾತನಾಡಿದ್ದಾಗಿ ತಿಳಿಸಿದರು.

ಯುಎಇಯೊಂದಿಗೆ ವಿಸ್ತರಿಸುತ್ತಿರುವ ಶೈಕ್ಷಣಿಕ ಸಂಬಂಧಗಳು ಉನ್ನತ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿವೆ. ಭಾರತವು ತನ್ನ ಅನಿವಾಸಿ ಬಂಧುಗಳೊಂದಿಗೆ ಸದಾ ಭಾವನಾತ್ಮಕ ಬೆಸುಗೆ ಹೊಂದಿದ್ದು, ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಅಮೂಲ್ಯವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

Author

ANU News

Follow Me
Other Articles
Previous

India A Face Pakistan A on November 22 after Historic Nepal Win

Next

NRIs Play Significant Role in Strengthening India-UAE Relations: Pralhad Joshi

Recent Posts

  • Karnataka Woos South Korean Investments, Seeks Industrial Township
  • ದಕ್ಷಿಣ ಕೊರಿಯಾದೊಂದಿಗೆ ಕರ್ನಾಟಕದ ಕೈಗಾರಿಕಾ, ತಂತ್ರಜ್ಞಾನ ಸಹಭಾಗಿತ್ವ ಬಲಪಡಿಸಲು ಚರ್ಚೆ
  • NRIs Play Significant Role in Strengthening India-UAE Relations: Pralhad Joshi
  • ಭಾರತ-ಯುಎಇ ಬಾಂಧವ್ಯ ಬಲವರ್ಧನೆಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ: ಪ್ರಲ್ಹಾದ್ ಜೋಶಿ
  • India A Face Pakistan A on November 22 after Historic Nepal Win
Copyright 2026 — ANU News. All rights reserved. Blogsy WordPress Theme