Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಒಡಿಶಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ, ನಿವೃತ್ತಿ ನೆರವು ಹೆಚ್ಚಳ

By ANU News
November 28, 2026 1 Min Read
Comments Off on ಒಡಿಶಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ, ನಿವೃತ್ತಿ ನೆರವು ಹೆಚ್ಚಳ

ಭುವನೇಶ್ವರ: ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರು ಕನಿಷ್ಠ ವೇತನಕ್ಕಾಗಿ ಹಗಲು-ರಾತ್ರಿ ಹೋರಾಟ ನಡೆಸುತ್ತಿದೆ. ಆದರೆ ಕೇಂದ್ರ-ರಾಜ್ಯ ಸರ್ಕಾರಗಳು ಕರುಣೆ ತೋರುತ್ತಿಲ್ಲ ಎಂದು ಹೋರಾಟಗಾರು ಆರೋಪಿಸಿದ್ದಾರೆ. ಅತ್ತ ಒಡಿಶಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ, ನಿವೃತ್ತಿ ನೆರವು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸುವ ಮೂಲಕ ಒಡಿಶಾ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಕಾರ್ಯಕರ್ತೆಯರ ಮಾಸಿಕ ಗೌರವಧನ ₹10 ಸಾವಿರದಿಂದ ₹12 ಸಾವಿರಕ್ಕೆ, ಸಹಾಯಕಿಯರ ಗೌರವಧನ ₹5 ಸಾವಿರದಿಂದ ₹6 ಸಾವಿರಕ್ಕೆ ಏರಿಸಲಾಗಿದೆ.

ಎಕ್ಸ್‌ಗ್ರೇಷಿಯಾ ಪರಿಹಾರವನ್ನು ₹2 ಲಕ್ಷದಿಂದ ₹4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಿವೃತ್ತಿ ನಿರ್ಗಮನ ನೀತಿಯಡಿ ಕಾರ್ಯಕರ್ತೆಯರಿಗೆ ನೀಡುವ ನೆರವನ್ನು ₹1 ಲಕ್ಷದಿಂದ ₹3 ಲಕ್ಷಕ್ಕೆ ಹಾಗೂ ಸಹಾಯಕಿಯರಿಗೆ ₹50 ಸಾವಿರದಿಂದ ₹1.5 ಲಕ್ಷಕ್ಕೆ ಏರಿಸಲಾಗಿದೆ.

ವಿವಿಧ ಯೋಜನೆಗಳಡಿ ವಾರ್ಷಿಕ ಪ್ರೋತ್ಸಾಹಧನವೂ ಮುಂದುವರಿಯಲಿದೆ. ಈ ಕುರಿತು ಒಡಿಶಾ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಘೋಷಣೆ ಮಾಡಿದರು.

ನವೆಂಬರ್ 23ರಿಂದ ಭುವನೇಶ್ವರದ ಲೋವರ್ ಪಿಎಂಜಿಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು. ಇದರಿಂದ ರಾಜ್ಯದ 74 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳ ಸೇವೆಗೆ ಅಡ್ಡಿಯಾಗಿತ್ತು. ಸರ್ಕಾರದ ವೇತನ ಮತ್ತು ಸೌಲಭ್ಯ ಹೆಚ್ಚಳದ ಘೋಷಣೆ ಬೆನ್ನಲ್ಲೇ ಕಾರ್ಯಕರ್ತೆಯರು ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

ಕಾರ್ಯಕರ್ತೆಯರ ಗೌರವ, ಘನತೆ ಮತ್ತು ಆರ್ಥಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

Author

ANU News

Follow Me
Other Articles
Previous

ಪಾಕ್ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿ: ಭಾರತದ ಭದ್ರತೆಗೆ ಸವಾಲು! ನಾವೂ ಸೇನಾ ಉಪಗ್ರಹ ವ್ಯವಸ್ಥೆ ಬಲಪಡಿಸುವುದು ಅಗತ್ಯ ಎಂದ ಸಿಡಿಎಸ್

Next

Odisha Hikes Anganwadi Workers’ Pay, Boosts Retirement Benefits

Recent Posts

  • Odisha Hikes Anganwadi Workers’ Pay, Boosts Retirement Benefits
  • ಒಡಿಶಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ, ನಿವೃತ್ತಿ ನೆರವು ಹೆಚ್ಚಳ
  • ಪಾಕ್ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿ: ಭಾರತದ ಭದ್ರತೆಗೆ ಸವಾಲು! ನಾವೂ ಸೇನಾ ಉಪಗ್ರಹ ವ್ಯವಸ್ಥೆ ಬಲಪಡಿಸುವುದು ಅಗತ್ಯ ಎಂದ ಸಿಡಿಎಸ್
  • Pakistan’s Space Advances Raise Security Concerns for India: CDS
  • Karnataka’s Political Representation at Risk Under Delimitation, Says Parameshwara
Copyright 2026 — ANU News. All rights reserved. Blogsy WordPress Theme