Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಇಂಡಿಯಾ

By Anu News
August 28, 2026 1 Min Read
0

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪ್ರಕಟಣೆಯಿಂದ ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿದೆ.

ನವೆಂಬರ್ 10ರಂದು ಪುಸ್ತಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಬೇಕಿತ್ತು. ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿರುವ ಆಲ್‌ಫ್ರೆಡ್ ಎ. ನಾಫ್ ಸಂಸ್ಥೆ ಪುಸ್ತಕವನ್ನು ಪ್ರಕಟಿಸಲು ಸಿದ್ಧತೆ ನಡೆಸಿತ್ತು. ಆರಂಭಿಕವಾಗಿ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಲು ಯೋಜಿಸಲಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಪೆಂಗ್ವಿನ್ ಇಂಡಿಯಾ, ಲೇಖಕರ ಹಾಗೂ ಪುಸ್ತಕದ ಹಿತಾಸಕ್ತಿಗೆ ಅನುಗುಣವಾಗಿ ಕೃತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು ಪ್ರಕಾಶಕರ ಹಕ್ಕು ಮತ್ತು ಜವಾಬ್ದಾರಿ. ಆದರೆ, ಲೇಖಕರೊಂದಿಗೆ ನಡೆದ ಗೌಪ್ಯ ಚರ್ಚೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದೆ.

ಸೋನಿಯಾ ಗಾಂಧಿ ಅವರ ಬಾಲ್ಯ, ಎರಡನೇ ಮಹಾಯುದ್ಧದ ನಂತರದ ಇಟಲಿಯಲ್ಲಿನ ಜೀವನ, ಭಾರತಕ್ಕೆ ಆಗಮನ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹದ ಅನುಭವಗಳು ಆತ್ಮಕಥೆಯಲ್ಲಿ ಇರಲಿವೆ ಎಂದು ನಿರೀಕ್ಷಿಸಲಾಗಿತ್ತು.

ಇದರೊಂದಿಗೆ ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಿಧನ ಸೇರಿದಂತೆ ಕುಟುಂಬದಲ್ಲಿ ನಡೆದ ಪ್ರಮುಖ ದುರಂತಗಳ ಬಗ್ಗೆಯೂ ಪುಸ್ತಕದಲ್ಲಿ ವಿವರಗಳಿರಲಿವೆ ಎನ್ನಲಾಗಿತ್ತು.

ಸೋನಿಯಾ ಗಾಂಧಿ ಅವರ ಸಾರ್ವಜನಿಕ ಜೀವನಕ್ಕೆ ಪ್ರವೇಶ, ನೆಹರೂ-ಗಾಂಧಿ ಕುಟುಂಬದೊಂದಿಗಿನ ದೀರ್ಘಕಾಲದ ಅನುಭವಗಳು ಹಾಗೂ ಭಾರತದ ಪ್ರಮುಖ ರಾಜಕೀಯ ಕುಟುಂಬವೊಂದರ ಕೇಂದ್ರಬಿಂದುವಾಗಿ ಕಳೆದ ವರ್ಷಗಳ ಕುರಿತ ನೆನಪುಗಳೂ ಆತ್ಮಕಥೆಯ ಪ್ರಮುಖ ಅಂಶಗಳಾಗಿವೆ.

Author

Anu News

Follow Me
Other Articles
Previous

Kumaraswamy’s allegations are ‘opportunistic politics’: KPCC’s Ramesh Babu

Next

Penguin India pulls out of Sonia Gandhi memoir project

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಿಂದ ಸಭಾಪತಿ ಸಲೀಂ ಅಹ್ಮದ್ ಭೇಟಿ
    • Golden Paduka Puja takes centre stage at Annabrahma Chaturmasya in Gokarna
    • ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ
    • ‘Crazy Star’ Ravichandran set for political debut? Actor likely to enter Karnataka Legislative Council
    • ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ
    Copyright 2026 — ANU News. All rights reserved. Blogsy WordPress Theme