Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಚಂಡಮಾರುತದ ಅಬ್ಬರ; ವಿದ್ಯುತ್ ವ್ಯತ್ಯಯದಿಂದ ಕಗ್ಗತ್ತಲಲ್ಲಿ ಅಮೆರಿಕದ ಪೂರ್ವ ಕರಾವಳಿ

By ANU News
November 29, 2026 1 Min Read
Comments Off on ಚಂಡಮಾರುತದ ಅಬ್ಬರ; ವಿದ್ಯುತ್ ವ್ಯತ್ಯಯದಿಂದ ಕಗ್ಗತ್ತಲಲ್ಲಿ ಅಮೆರಿಕದ ಪೂರ್ವ ಕರಾವಳಿ

ವಾಷಿಂಗ್ಟನ್: ಅಮೆರಿಕದ ಪೂರ್ವ ಕರಾವಳಿಯಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದ ಭಾರಿ ಹಾನಿಯಾಗಿದೆ. ಎರಡು ದಿನ ಕಳೆದರೂ ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಶನಿವಾರ ಬೆಳಿಗ್ಗೆಯ ವೇಳೆಗೆ 1.6 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಗಂಟೆಗೆ 50ರಿಂದ 70 ಮೈಲಿ ವೇಗದಲ್ಲಿ ಬೀಸಿದ ಗಾಳಿ ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್, ವರ್ಜೀನಿಯಾ ಸೇರಿದಂತೆ ಹಲವು ಪ್ರದೇಶಗಳನ್ನು ತತ್ತರಗೊಳಿಸಿದೆ. ಜರ್ಸಿ ಶೋರ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ ಜನರು ಮತ್ತು ವಾಹನಗಳನ್ನು ರಕ್ಷಿಸಲಾಗಿದೆ. ಕೇಪ್ ಮೇನಲ್ಲಿ 16 ಹಾಗೂ ಅಟ್ಲಾಂಟಿಕ್ ಸಿಟಿಯಲ್ಲಿ 14 ಮಂದಿಯನ್ನು ರಕ್ಷಿಸಲಾಗಿದೆ.

ಅಟ್ಲಾಂಟಿಕ್ ಸಿಟಿಯಲ್ಲಿ ಸಮುದ್ರದ ನೀರಿನ ಮಟ್ಟ 8.28 ಅಡಿಗೆ ಏರಿದ್ದು, 2012ರ ಸ್ಯಾಂಡಿ ಚಂಡಮಾರುತದ ಬಳಿಕ ಗರಿಷ್ಠ ಮಟ್ಟ ದಾಖಲಿಸಿದೆ. ನ್ಯೂಜೆರ್ಸಿಯ 21 ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನ್ಯೂಯಾರ್ಕ್ ಮತ್ತು ವರ್ಜೀನಿಯಾದಲ್ಲೂ ತುರ್ತು ಕ್ರಮ ಜಾರಿಯಲ್ಲಿದೆ. ಉತ್ತರ ಕೆರೊಲಿನಾ ಮತ್ತು ಕನೆಕ್ಟಿಕಟ್‌ನಲ್ಲೂ ಹಾನಿಯಾಗಿದ್ದು, ವಿದ್ಯುತ್ ಮರುಸ್ಥಾಪನೆ ಕಾರ್ಯ ಮುಂದುವರಿದಿದೆ.

Author

ANU News

Follow Me
Other Articles
Previous

ಚುನಾವಣೆ ಅಕ್ರಮ ಎನ್ನುವ ರಾಹುಲ್ ಗೆದ್ದಿದ್ದು ಹೇಗೆ? ರಾಜೀನಾಮೆ ನೀಡಲಿ ಎಂದು ಬಿಜೆಪಿ ಸವಾಲು!

Next

Floods Submerge 1,700 Homes in Vietnam’s Quang Ngai Province

Recent Posts

  • Floods Submerge 1,700 Homes in Vietnam’s Quang Ngai Province
  • ಚಂಡಮಾರುತದ ಅಬ್ಬರ; ವಿದ್ಯುತ್ ವ್ಯತ್ಯಯದಿಂದ ಕಗ್ಗತ್ತಲಲ್ಲಿ ಅಮೆರಿಕದ ಪೂರ್ವ ಕರಾವಳಿ
  • ಚುನಾವಣೆ ಅಕ್ರಮ ಎನ್ನುವ ರಾಹುಲ್ ಗೆದ್ದಿದ್ದು ಹೇಗೆ? ರಾಜೀನಾಮೆ ನೀಡಲಿ ಎಂದು ಬಿಜೆಪಿ ಸವಾಲು!
  • Fadnavis Targets Congress, Accuses Rahul Gandhi of Spreading Misinformation
  • ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬದಲಿಸಲು ಕಾಂಗ್ರೆಸ್ ಯತ್ನ: ಬೆಳಗಾವಿಯ ‘ಸಂವಿಧಾನ ಉಳಿಸಿ’ ಕಾರ್ಯಕ್ರಮದಲ್ಲಿ ಫಡ್ನವೀಸ್ ವಾಗ್ದಾಳಿ
Copyright 2026 — ANU News. All rights reserved. Blogsy WordPress Theme