Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘Powering What’s Next’; ಜಾಗತಿಕ ಹೂಡಿಕೆ ಆಕರ್ಷಣೆಗೆ ಕರ್ನಾಟಕ ಸಜ್ಜು; ಏಪ್ರಿಲ್ 20ರಿಂದ GIM–2027

By ANU News
November 14, 2026 1 Min Read
Comments Off on ‘Powering What’s Next’; ಜಾಗತಿಕ ಹೂಡಿಕೆ ಆಕರ್ಷಣೆಗೆ ಕರ್ನಾಟಕ ಸಜ್ಜು; ಏಪ್ರಿಲ್ 20ರಿಂದ GIM–2027

ಬೆಂಗಳೂರು: ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿ, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ನೀಡುವ ಉದ್ದೇಶದಿಂದ 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ‘ಇನ್ವೆಸ್ಟ್ ಕರ್ನಾಟಕ–ಜಾಗತಿಕ ಹೂಡಿಕೆದಾರರ ಸಮಾವೇಶ’ ಆಯೋಜಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

‘Powering What’s Next’ ಎಂಬ ಆಶಯದೊಂದಿಗೆ ನಡೆಯಲಿರುವ ಸಮಾವೇಶದ ಮೂಲಕ ಕರ್ನಾಟಕವನ್ನು ಭವಿಷ್ಯದ ಕೈಗಾರಿಕಾ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.

2025ರ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯವು ಸುಮಾರು ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದಗಳನ್ನು ಆಕರ್ಷಿಸಿತ್ತು. ಉತ್ಪಾದನಾ ವಲಯದ ಹೂಡಿಕೆಗಳಲ್ಲಿ ಸುಮಾರು ಶೇ.65ರಷ್ಟು ಈಗಾಗಲೇ ಅನುಷ್ಠಾನದ ಹಂತ ತಲುಪಿವೆ ಎಂದು ಸರ್ಕಾರ ತಿಳಿಸಿದೆ.

ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವಿದ್ಯುತ್ ವಾಹನ, ಉಕ್ಕು, ಸಿಮೆಂಟ್, ನವೀಕರಿಸಬಹುದಾದ ಇಂಧನ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಲಬುರಗಿ, ಕೊಪ್ಪಳ, ಬೆಳಗಾವಿ, ಕೋಲಾರ ಮತ್ತು ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಹೂಡಿಕೆ ವಿಸ್ತರಿಸುವ ಪ್ರಯತ್ನ ನಡೆದಿದೆ.

ಕೈಗಾರಿಕಾ ನೀತಿ 2025–30ರಡಿ ಅರ್ಹ ಹೂಡಿಕೆದಾರರಿಗೆ ಬಂಡವಾಳ ಸಬ್ಸಿಡಿ ಅಥವಾ ಉತ್ಪಾದನೆ ಆಧಾರಿತ ಪ್ರೋತ್ಸಾಹಧನದ ಆಯ್ಕೆ ಕಲ್ಪಿಸಲಾಗಿದೆ. ಉದ್ಯಮಿಗಳಿಂದ ಪಡೆದ 55 ಸಲಹೆಗಳಲ್ಲಿ 35ಕ್ಕೂ ಹೆಚ್ಚು ಸಲಹೆಗಳನ್ನು ಜಾರಿಗೊಳಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ರೋಡ್‌ಶೋಗಳು, ದೇಶವಾರು ಹೂಡಿಕೆದಾರರ ಸಭೆಗಳು ಹಾಗೂ ಪೂರೈಕೆದಾರರ ಸಮಾವೇಶ ಆಯೋಜಿಸಲು ಯೋಜಿಸಲಾಗಿದೆ. ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಪ್ರತ್ಯೇಕ ಹೂಡಿಕೆದಾರರ ಸಮಾವೇಶವನ್ನೂ ನಡೆಸಲು ಸರ್ಕಾರ ಉದ್ದೇಶಿಸಿದೆ.

ಹೆಚ್ಚಿನ ಹೂಡಿಕೆ, ಉದ್ಯೋಗ ಸೃಷ್ಟಿ, ಬೆಂಗಳೂರಿನಾಚೆಗೂ ಕೈಗಾರಿಕಾ ಬೆಳವಣಿಗೆ ಮತ್ತು ಸರಳ, ಪಾರದರ್ಶಕ ಹೂಡಿಕೆ ವ್ಯವಸ್ಥೆ ನಿರ್ಮಿಸುವುದು ಸಮಾವೇಶದ ಪ್ರಮುಖ ಗುರಿಯಾಗಿದೆ.

Author

ANU News

Follow Me
Other Articles
Previous

ಆಂಧ್ರಪ್ರದೇಶದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ತಂತ್ರಜ್ಞಾನ ಪಾರ್ಕ್; ಸ್ಮೃತಿ ಇರಾನಿ ಸ್ವಾಗತ

Next

Karnataka to Woo Global Investors at April 2027 Summit, Focus on North Karnataka Growth

Recent Posts

  • Karnataka to Woo Global Investors at April 2027 Summit, Focus on North Karnataka Growth
  • ‘Powering What’s Next’; ಜಾಗತಿಕ ಹೂಡಿಕೆ ಆಕರ್ಷಣೆಗೆ ಕರ್ನಾಟಕ ಸಜ್ಜು; ಏಪ್ರಿಲ್ 20ರಿಂದ GIM–2027
  • ಆಂಧ್ರಪ್ರದೇಶದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ತಂತ್ರಜ್ಞಾನ ಪಾರ್ಕ್; ಸ್ಮೃತಿ ಇರಾನಿ ಸ್ವಾಗತ
  • Tamil Nadu CM Vijay Reviews Fishermen’s Safety Amid Northeast Monsoon
  • ಸ್ಟಾರ್‌ಲಿಂಕ್ ವೇಗ ಮಿತಿಗೆ ಅಮೆರಿಕದ ಸ್ಪಷ್ಟನೆ ಕೋರಿದ ಝೆಲೆನ್ಸ್ಕಿ
Copyright 2026 — ANU News. All rights reserved. Blogsy WordPress Theme