Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಚಾಮುಂಡಿಬೆಟ್ಟದ ರಥೋತ್ಸವದ ದಿನವೇ ಅಂಬಾರಿ ಮೆರವಣಿಗೆ ನಡೆಯಲಿ; ಪ್ರಮೋದಾದೇವಿ ಸಲಹೆ

By ANU News
October 26, 2026 1 Min Read
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಅಂಬಾರಿ ಆನೆಯ ಆಯ್ಕೆ ಕುರಿತು ಮಾಹಿತಿ ಮುಚ್ಚಿಡಲಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಆನೆಯ ಆಯ್ಕೆಯ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಾವೇ ಕೇಳಿದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮಾಹಿತಿ ನೀಡಿರಲಿಲ್ಲ. ಕೊನೆ ಕ್ಷಣದಲ್ಲಿ ಡಿಸಿಎಫ್ ಮೂಲಕ ಜಂಬೂಸವಾರಿಯ ಆನೆಯ ಬಗ್ಗೆ ಮಾಹಿತಿ ಪಡೆಯಬೇಕಾಯಿತು ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ದಸರಾ ಅರಮನೆ ಕಾರ್ಯಕ್ರಮಗಳ ಆಯೋಜನೆ ಕುರಿತು ರಾಜ್ಯ ಸರ್ಕಾರಕ್ಕೆ ಮೂರು ಸಲಹೆಗಳನ್ನು ನೀಡಿರುವ ಅವರು, ದಸರಾ ಮೊದಲ ದಿನದಿಂದ ಏಳನೇ ದಿನದವರೆಗೆ ಎಂದಿನಂತೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.

ಆಯುಧ ಪೂಜೆ ಮತ್ತು ವಿಜಯದಶಮಿ ದಿನ ಅರಮನೆ ಆವರಣವನ್ನು ಮುಕ್ತವಾಗಿಡಬೇಕು. ರಾಜ ಕುಟುಂಬವು ಸ್ವತಂತ್ರವಾಗಿ ಈ ಎರಡೂ ಆಚರಣೆಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಚಾಮುಂಡಿಬೆಟ್ಟದ ರಥೋತ್ಸವದ ದಿನವೇ ಅಂಬಾರಿ ಮೆರವಣಿಗೆ ನಡೆಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಅಂಬಾರಿ ಮೆರವಣಿಗೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

Author

ANU News

Follow Me
Other Articles
Previous

CEC ಆಯ್ಕೆ ಸಮಿತಿ ಬದಲಾವಣೆ: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

Next

Mysuru Dasara: Pramodadevi Wadiyar Expresses Displeasure Over Ambari Elephant Selection

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Hassan Artist K.R. Basavarajachar Wins Prestigious Print Biennale India–2026 Award
    • ಪ್ರತಿಷ್ಠಿತ ಪ್ರಿಂಟ್ ಬಿನಾಲೆ ಇಂಡಿಯಾ–2026 ಪ್ರಶಸ್ತಿ ಪಡೆದ ಹಾಸನ ಜಿಲ್ಲೆಯ ಕಲಾವಿದ
    • ಮೋದಿ ಅವರ ತಂದೆಯ ಕುರಿತ ಹೇಳಿಕೆ: ಖರ್ಗೆ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
    • Rajnath Singh Slams Kharge Over Remarks on PM Modi’s Father, Accuses Congress of Lowering Political Discourse
    • Japan’s Denso Iris Crowned FIBA Asia Women’s Basketball League Champions
    Copyright 2026 — ANU News. All rights reserved. Blogsy WordPress Theme