Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಚುನಾವಣಾ ಆಯೋಗ ಇನ್ನಷ್ಟು ಪಾರದರ್ಶಕವಾಗಿ ಇರಬೇಕು: ಪ್ರಿಯಾಂಕ್ ಖರ್ಗೆ

By ANU News
October 28, 2026 1 Min Read
0

ಬೆಂಗಳೂರು: ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಕಾರ್ಯವೈಖರಿಯಲ್ಲಿ ಇನ್ನಷ್ಟು ಪಾರದರ್ಶಕತೆ ಇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಚುನಾವಣಾ ಆಯುಕ್ತರ ಭಿನ್ನಮತದ ಪತ್ರಗಳ ವಿಚಾರ ಪ್ರಸ್ತಾಪಿಸಿರುವ ಅವರು, ನಿರ್ಧಾರ ಸರ್ವಾನುಮತದಿಂದ ಆಗಿದ್ದರೆ ಭಿನ್ನಮತದ ಪತ್ರಗಳ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.

ಮೂವರು ಆಯುಕ್ತರಲ್ಲಿ ಇಬ್ಬರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರವನ್ನು ಒಪ್ಪಿರಲಿಲ್ಲ ಎಂಬ ಆರೋಪವನ್ನು ಉಲ್ಲೇಖಿಸಿದ ಖರ್ಗೆ, ನಿರ್ಧಾರ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆಯೇ ಅಥವಾ ಸರ್ವಾನುಮತದಿಂದ ಆಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಭಿನ್ನಮತದ ಪತ್ರಗಳನ್ನು ಕಾಂಗ್ರೆಸ್ ಬರೆದಿಲ್ಲ, ಆಯುಕ್ತರೇ ಬರೆದಿದ್ದಾರೆ ಎಂದು ಹೇಳಿರುವ ಅವರು, ಕೇಂದ್ರ ಸರ್ಕಾರದ ಒತ್ತಡದಿಂದ ಆ ಪತ್ರಗಳನ್ನು ಹಿಂಪಡೆಯುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜ್ಞಾನೇಶ್ ಕುಮಾರ್ ಪರವಾಗಿ ಬಿಜೆಪಿ ನಾಯಕರು ಉತ್ತರಿಸುತ್ತಿರುವುದೇಕೆ ಎಂದೂ ಪ್ರಶ್ನಿಸಿದ್ದಾರೆ.

ಜ್ಞಾನೇಶ್ ಕುಮಾರ್ ಅವರಿಗೆ ನ್ಯಾಯಾಂಗ ವಿನಾಯಿತಿ ನೀಡಿರುವ ವಿಚಾರವನ್ನೂ ಪ್ರಸ್ತಾಪಿಸಿರುವ ಖರ್ಗೆ, ನಿರ್ಧಾರ ಸರ್ವಾನುಮತದಿಂದ ಆಗಿದ್ದರೆ ನ್ಯಾಯಾಂಗ ವಿನಾಯಿತಿಯನ್ನು ತೆಗೆದುಹಾಕಲಿ ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗದ ಸಾಫ್ಟ್‌ವೇರ್‌ನಲ್ಲಿನ ಲೋಪಗಳಿಗೆ ಆದೇಶ ನೀಡಿದವರು ಯಾರು? ಅದರಲ್ಲಿ ಬದಲಾವಣೆ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಹಲವು ನಿರ್ಧಾರಗಳ ಕುರಿತು ಇನ್ನೂ ಅನೇಕ ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Author

ANU News

Follow Me
Other Articles
Previous

Flydubai Captain, Crew Honoured for Courage During September Cockpit Attack

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಚುನಾವಣಾ ಆಯೋಗ ಇನ್ನಷ್ಟು ಪಾರದರ್ಶಕವಾಗಿ ಇರಬೇಕು: ಪ್ರಿಯಾಂಕ್ ಖರ್ಗೆ
    • Flydubai Captain, Crew Honoured for Courage During September Cockpit Attack
    • ಕಾಕ್‌ಪಿಟ್‌ನಲ್ಲಿ ಪ್ರಾಣಾಪಾಯದ ದಾಳಿ: ಭಾರತೀಯ ಪೈಲಟ್‌ನ ಸಾಹಸಕ್ಕೆ ಯುಎಇ ಸನ್ಮಾನ
    • Malayalam Devotional Film ‘Harivarasanam’ to Release on January 15
    • Temple Entry Rules Tightened: Non-Hindus Must Respect Traditions, Says Madras HC
    Copyright 2026 — ANU News. All rights reserved. Blogsy WordPress Theme