Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ವಾರ್ಷಿಕ ಆದಾಯ ₹5 ಲಕ್ಷದೊಳಗಿನ SC/ST ರೋಗಿಗಳಿಗೆ ₹3.5 ಲಕ್ಷದವರೆಗೆ ವೈದ್ಯಕೀಯ ನೆರವು!

By ANU News
November 29, 2026 1 Min Read
Comments Off on ವಾರ್ಷಿಕ ಆದಾಯ ₹5 ಲಕ್ಷದೊಳಗಿನ SC/ST ರೋಗಿಗಳಿಗೆ ₹3.5 ಲಕ್ಷದವರೆಗೆ ವೈದ್ಯಕೀಯ ನೆರವು!

ನವದೆಹಲಿ: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳ ವಾರ್ಷಿಕ ಆದಾಯ ₹5 ಲಕ್ಷದವರೆಗೆ ಇದ್ದರೆ, ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ₹3.5 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಬಹುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.

ಡಾ. ಅಂಬೇಡ್ಕರ್ ಫೌಂಡೇಶನ್ ಮೂಲಕ ಜಾರಿಗೊಳಿಸಿರುವ ಪರಿಷ್ಕೃತ ವೈದ್ಯಕೀಯ ನೆರವು ಯೋಜನೆಯಡಿ ಹೃದಯ, ಮೂತ್ರಪಿಂಡ, ಕ್ಯಾನ್ಸರ್, ಮೆದುಳು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಸೇರಿದಂತೆ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ.

2026ರ ಜೂನ್ 2ರಂದು ಅಧಿಸೂಚಿಸಲಾದ ಮಾರ್ಗಸೂಚಿಗಳ ಪ್ರಕಾರ, ನಿಗದಿತ ಮಿತಿಯೊಳಗೆ ಚಿಕಿತ್ಸಾ ವೆಚ್ಚದ ಶೇ.100ರಷ್ಟು ಹಣವನ್ನು ನೇರವಾಗಿ ಆಸ್ಪತ್ರೆಗೆ ಪಾವತಿಸಲಾಗುತ್ತದೆ. ಮೂತ್ರಪಿಂಡ ಶಸ್ತ್ರಚಿಕಿತ್ಸೆ, ಡಯಾಲಿಸಿಸ್ ಮತ್ತು ಅಂಗಾಂಗ ಕಸಿಗೆ ಗರಿಷ್ಠ ₹3.5 ಲಕ್ಷ, ಕ್ಯಾನ್ಸರ್ ಚಿಕಿತ್ಸೆಗೆ ₹2.5 ಲಕ್ಷ, ಮೆದುಳಿನ ಶಸ್ತ್ರಚಿಕಿತ್ಸೆಗೆ ₹2 ಲಕ್ಷ ಹಾಗೂ ಹೃದಯ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ₹1.5 ಲಕ್ಷ ನೆರವು ಲಭ್ಯವಿದೆ.

ಅರ್ಜಿ ಸಲ್ಲಿಸಲು ಆದಾಯ ಮತ್ತು ಜಾತಿ ಪ್ರಮಾಣಪತ್ರ, ಪಡಿತರ ಚೀಟಿ ಅಥವಾ ಆಧಾರ್, ಭಾವಚಿತ್ರ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಸಲ್ಲಿಸಬೇಕು. ಚಿಕಿತ್ಸೆ ಆರಂಭಕ್ಕೆ ಕನಿಷ್ಠ 15 ದಿನಗಳ ಮೊದಲು ಅರ್ಜಿ ಡಾ. ಅಂಬೇಡ್ಕರ್ ಫೌಂಡೇಶನ್‌ಗೆ ತಲುಪಬೇಕು.

Author

ANU News

Follow Me
Other Articles
Previous

Karnataka Raises ASHA Workers’ Honorarium by ₹2,000; Monthly Assured Payment to Be ₹10,000; UT Khader

Next

Hariprasad Urges Communities to Unite for Social Justice, Cites Narayana Guru’s Ideals

Recent Posts

  • ಚಂಡಮಾರುತದ ಅಬ್ಬರ; ವಿದ್ಯುತ್ ವ್ಯತ್ಯಯದಿಂದ ಕಗ್ಗತ್ತಲಲ್ಲಿ ಅಮೆರಿಕದ ಪೂರ್ವ ಕರಾವಳಿ
  • ಚುನಾವಣೆ ಅಕ್ರಮ ಎನ್ನುವ ರಾಹುಲ್ ಗೆದ್ದಿದ್ದು ಹೇಗೆ? ರಾಜೀನಾಮೆ ನೀಡಲಿ ಎಂದು ಬಿಜೆಪಿ ಸವಾಲು!
  • Fadnavis Targets Congress, Accuses Rahul Gandhi of Spreading Misinformation
  • ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬದಲಿಸಲು ಕಾಂಗ್ರೆಸ್ ಯತ್ನ: ಬೆಳಗಾವಿಯ ‘ಸಂವಿಧಾನ ಉಳಿಸಿ’ ಕಾರ್ಯಕ್ರಮದಲ್ಲಿ ಫಡ್ನವೀಸ್ ವಾಗ್ದಾಳಿ
  • Lok Sabha Seats May Rise to 816; Karnataka Could Get 40: Pralhad Joshi
Copyright 2026 — ANU News. All rights reserved. Blogsy WordPress Theme