Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಅಂಬೇಡ್ಕರ್ ವಿಚಾರಧಾರೆ ಪ್ರತಿಯೊಬ್ಬರಿಗೂ ತಲುಪಲಿ ಎಂದ ಮಾವಳ್ಳಿ ಶಂಕರ್

By ANU News
September 18, 2026 1 Min Read
0

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ವಿಚಾರಧಾರೆ ಹಾಗೂ ಕೊಡುಗೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ದಲಿತರು, ಕೆಳಜಾತಿ ಹಾಗೂ ಮೀಸಲಾತಿಗೆ ಸೀಮಿತಗೊಳಿಸಿ ನೋಡುವ ಮನೋಭಾವವಿದೆ. ಅವರ ಬಹುಮುಖ ಚಿಂತನೆ, ಶಿಕ್ಷಣ ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳ ಕುರಿತು ಹೆಚ್ಚಿನ ಅರಿವು ಮೂಡಬೇಕು ಎಂದರು.

ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತು ಓದಬೇಕು

ಅಂಬೇಡ್ಕರ್ ಅವರು ಹೇಗೆ ಶಿಕ್ಷಣ ಪಡೆದರು, ಉನ್ನತ ಶಿಕ್ಷಣವನ್ನು ಹೇಗೆ ಮುಂದುವರಿಸಿದರು ಹಾಗೂ ವಿವಿಧ ಹುದ್ದೆಗಳಲ್ಲಿ ನಿರ್ವಹಿಸಿದ ಜವಾಬ್ದಾರಿಗಳ ಅನುಭವಗಳು ಎಲ್ಲರಿಗೂ ಪ್ರೇರಣಾದಾಯಕವಾಗಿವೆ. ಭಾರತೀಯರಾದ ನಾವು ಅವರ ಬದುಕು ಮತ್ತು ಚಿಂತನೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರ ಜ್ಞಾನ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳನ್ನು ವಿದೇಶಿ ಲೇಖಕರು ಹಾಗೂ ಸಂಶೋಧಕರು ಕೂಡ ಗುರುತಿಸಿ ಹಲವು ಕೃತಿಗಳಲ್ಲಿ ದಾಖಲಿಸಿದ್ದಾರೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಕುರಿತ ಪುಸ್ತಕಗಳನ್ನು ಓದುವ ಮೂಲಕ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತದ ಸಂವಿಧಾನ ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದ್ದು, ಅದರ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಭೆಯ ಹಲವು ಸದಸ್ಯರು ಪ್ರಮುಖವಾಗಿ ಶ್ರಮಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ವಿಶೇಷವಾಗಿತ್ತು ಎಂದು ಮಾವಳ್ಳಿ ಶಂಕರ್ ಹೇಳಿದರು.

ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ

ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಸೀಮಿತವಾಗದೆ ಉನ್ನತ ವ್ಯಾಸಂಗ ಮುಂದುವರಿಸುವ ಛಲ ಬೆಳೆಸಿಕೊಳ್ಳಬೇಕು. ಸಾಧ್ಯವಾದರೆ ವಿದೇಶದಲ್ಲೂ ಉನ್ನತ ಶಿಕ್ಷಣ ಪಡೆಯುವ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರ ‘ವಿದ್ಯಾರ್ಥಿ ತೆರೆದ ಸತ್ಯ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಬಿ. ಅಶೋಕ, ಕುಲಸಚಿವೆ ಸೀಮಾ ಬಿ. ನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ಡಾ. ಎ.ಎಸ್. ಆಶಾದೇವಿ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author

ANU News

Follow Me
Other Articles
Previous

Cabinet decisions herald new chapter for coastal Karnataka, says Padmaraj Poojary

Next

Ambedkar’s ideas and contributions should reach everyone, says Mavalli Shankar

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Ambedkar’s ideas and contributions should reach everyone, says Mavalli Shankar
    • ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಅಂಬೇಡ್ಕರ್ ವಿಚಾರಧಾರೆ ಪ್ರತಿಯೊಬ್ಬರಿಗೂ ತಲುಪಲಿ ಎಂದ ಮಾವಳ್ಳಿ ಶಂಕರ್
    • Cabinet decisions herald new chapter for coastal Karnataka, says Padmaraj Poojary
    • ‘ತುಳು ಭಾಷೆಗೆ ಮಾನ್ಯತೆ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮಕ್ಕೆ ಒತ್ತು’; ರಾಜ್ಯ ಸಂಪುಟ ನಿರ್ಧಾರಗಳನ್ನು ‘ಕರಾವಳಿ ಜನರ ಬದುಕಿಗೆ ನವೋದಯ’ ಎಂದ ಪದ್ಮರಾಜ್ ಪೂಜಾರಿ
    • Coastal Karnataka lawyers step up demand for High Court bench in Mangaluru
    Copyright 2026 — ANU News. All rights reserved. Blogsy WordPress Theme