ಎಸ್‌ಐಆರ್, ಇವಿಎಂ ವಿವಾದ: ರಾಹುಲ್ ಗಾಂಧಿಗೆ ತೇಜಸ್ವಿ ಸೂರ್ಯ ‘ಪಂಚ್’ ಪ್ರಶ್ನೆ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಇವಿಎಂ ತಿರುಚುವಿಕೆ ಆರೋಪ ಹಾಗೂ ಕಾಂಗ್ರೆಸ್‌ನ ಚುನಾವಣಾ ಸಾಧನೆಗೆ ಸಂಬಂಧಿಸಿದಂತೆ ಐದು ಪ್ರಶ್ನೆಗಳನ್ನು ಮುಂದಿಟ್ಟು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
‘ಎಕ್ಸ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಎಸ್‌ಐಆರ್ ಪ್ರಕ್ರಿಯೆ ಕುರಿತು ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳನ್ನು ಪ್ರಶ್ನಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ನಡೆದ 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಗೆ ಗೆಲುವು ಸಾಧಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅಂದರೆ 2014ರಿಂದ ಫೆಬ್ರವರಿ 2025ರವರೆಗೆ ಕಾಂಗ್ರೆಸ್ ಎದುರಿಸಿದ 98 ಚುನಾವಣಾ ಸೋಲುಗಳಿಗೆ ಯಾರು ಹೊಣೆ ಎಂದು ಸೂರ್ಯ ಪ್ರಶ್ನಿಸಿದ್ದಾರೆ.

ಇವಿಎಂ ಆರೋಪದ ಬಗ್ಗೆ ಪ್ರಶ್ನೆ
ಕರ್ನಾಟಕ, ಕೇರಳ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಾಗ ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಳ್ಳುವ ಪಕ್ಷ, ಸೋಲನುಭವಿಸಿದಾಗ ಮಾತ್ರ ಇವಿಎಂ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದೇಕೆ ಎಂದು ಅವರು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿದ್ದೂ ಸೇರಿದಂತೆ, ಈ ಹಿಂದೆ ನಡೆದ 10 ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳೂ ಅಕ್ರಮವಾಗಿದ್ದವೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
ತಮಿಳುನಾಡಿನಲ್ಲಿ 1967ರಿಂದ, ಪಶ್ಚಿಮ ಬಂಗಾಳದಲ್ಲಿ 1977ರಿಂದ, ಉತ್ತರ ಪ್ರದೇಶದಲ್ಲಿ 1989ರಿಂದ, ಗುಜರಾತ್‌ನಲ್ಲಿ 1995ರಿಂದ ಹಾಗೂ ಒಡಿಶಾದಲ್ಲಿ 2000ರಿಂದ ಕಾಂಗ್ರೆಸ್ ಸ್ವತಂತ್ರವಾಗಿ ಬಹುಮತ ಗಳಿಸಲು ವಿಫಲವಾಗಿದೆ ಎಂಬುದನ್ನು ಸೂರ್ಯ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ತನ್ನ ಚುನಾವಣಾ ಸೋಲುಗಳನ್ನು ಸಮರ್ಥಿಸಿಕೊಳ್ಳಲು ಎಸ್‌ಐಆರ್ ಮತ್ತು ಇವಿಎಂ ವಿವಾದಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ತಾವು ಮುಂದಿಟ್ಟಿರುವ ಐದು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
I have five direct questions for the Congress party that will puncture their balloon of lies about SIR.
1. If SIR explains PM Modi’s victories, how did he win three consecutive Lok Sabha elections in 2014, 2019 and 2024 without it?
2. If CEC Gyanesh Kumar is responsible for Congress’s defeats, who was responsible for its 98 electoral losses between 2014 and February 2025, before he became CEC?
3. If EVMs are hacked, why does Congress accept victories in Kerala, Karnataka, Telangana and elsewhere but question the same machines when it loses?
4. If SIR is illegal, were the 10 previous intensive electoral-roll revisions, including those under Congress governments headed by the Gandhis themselves, also illegal?
5. If EVMs, SIR and Gyanesh Kumar explain Congress’s defeats, what explains its failure to secure a majority of its own in Tamil Nadu since 1967, West Bengal since 1977, Uttar Pradesh since 1989, Gujarat since 1995 and Odisha since 2000?I dare you, Mr. @RahulGandhi. No diversions. No excuses. Just five straight answers.
— Tejasvi Surya (@Tejasvi_Surya) November 5, 2026