Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ, ಅಂತರರಾಷ್ಟ್ರೀಯ ದತ್ತು ಮಾಸಾಚರಣೆ, ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

By ANU News
November 7, 2026 2 Min Read
Comments Off on ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ, ಅಂತರರಾಷ್ಟ್ರೀಯ ದತ್ತು ಮಾಸಾಚರಣೆ, ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು: ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರು ನಗರ (ಕೇಂದ್ರ) ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ ಮತ್ತು ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಗಮನಸೆಳೆಯಿತು.

ನವೆಂಬರ್ 6ರಂದು ಬೆಂಗಳೂರಿನ ಸಿಐಟಿ ಆವರಣದ ಡಾ. ಬಿ.ವಿ. ಗೋವಿಂದಸ್ವಾಮಿ ಸೆಂಟರ್ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಾಗಾರವನ್ನು ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಎನ್. ಜನಾರ್ದನ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೀನಾ ಕಲ್ಲಮ್ಮನವರ್ ಉದ್ಘಾಟಿಸಿದರು. ಲೀನಾ ಕಲ್ಲಮ್ಮನವರ್ ಕಾರ್ಯಾಗಾರದ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್. ಜನಾರ್ದನ್, ಬಾಲ್ಯವಿವಾಹ, ಬಾಲನ್ಯಾಯ ಕಾಯ್ದೆ (ಜೆಜೆ ಆಕ್ಟ್) ಮತ್ತು ದತ್ತು ಸ್ವೀಕಾರದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಅಗತ್ಯವಿದೆ ಎಂದು ಹೇಳಿದರು. ಮಕ್ಕಳ ಪ್ರಕರಣಗಳು ಎದುರಾದಾಗ ಅವರ ಮಾನಸಿಕ ಸ್ಥಿತಿಯನ್ನು ಅರಿತು ಸಂವಹನ ನಡೆಸುವುದು ಹಾಗೂ ಕುಟುಂಬಗಳಲ್ಲಿ ಅಗತ್ಯ ಬದಲಾವಣೆ ತರುವುದು ಮುಖ್ಯ ಎಂದು ತಿಳಿಸಿದರು.

2026-27ನೇ ಸಾಲಿನ ದತ್ತು ಮಾಸಾಚರಣೆ ಅಂಗವಾಗಿ “ಪೋಷಕರಾಗಲು ಅಡ್ಡದಾರಿಗಳಿಲ್ಲ, ಕಾನೂನುಬದ್ಧ ದತ್ತು ಸ್ವೀಕಾರವೊಂದೇ ಸರಿಯಾದ ಮಾರ್ಗ” ಎಂಬ ಪ್ರತಿಜ್ಞಾವಿಧಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವೀಕರಿಸಿದರು.

ಸಿಐಡಿ ಕಚೇರಿಯ ಪೊಲೀಸ್ ತರಬೇತುದಾರ ರೋಹಿತ್ ಸಿ.ಬಿ. ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ, ಪ್ರಮುಖ ಕಾನೂನು ವಿಧಿಗಳು, ನಿಷೇಧಾಧಿಕಾರಿಗಳ ಜವಾಬ್ದಾರಿ ಹಾಗೂ ದೂರು ಬಂದಾಗ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯದ ಉಪನಿರ್ದೇಶಕಿ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕಿ ಅರುಂಧತಿ ಅವರು ದತ್ತು ನಿಯಮಗಳು-2022ರ ಅಡಿಯಲ್ಲಿ ದತ್ತು ಸ್ವೀಕಾರ, ಪೋಷಕ ಆರೈಕೆ, ಸಂಬಂಧಿಕರ ಮೂಲಕ ದತ್ತು ಮತ್ತು ಮಲತಾಯಿ-ಮಲತಂದೆಯಿಂದ ದತ್ತು ಸ್ವೀಕಾರ ಪ್ರಕ್ರಿಯೆಗಳ ಕುರಿತು ವಿವರಿಸಿದರು.

ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್, ಕಾರ್ಮಿಕ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Author

ANU News

Follow Me
Other Articles
Previous

Dispose of Praja Seva Andolana applications on time, K’taka minister tells officials

Next

Bengaluru Workshop Trains Officials on Child Marriage Prevention, Adoption Laws

Recent Posts

  • Bengaluru Workshop Trains Officials on Child Marriage Prevention, Adoption Laws
  • ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ, ಅಂತರರಾಷ್ಟ್ರೀಯ ದತ್ತು ಮಾಸಾಚರಣೆ, ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
  • Dispose of Praja Seva Andolana applications on time, K’taka minister tells officials
  • ಪ್ರಜಾಸೇವಾ ಆಂದೋಲನದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ: ಅಧಿಕಾರಿಗಳಿಗೆ ಸಚಿವ ರಘುಮೂರ್ತಿ ತಾಕೀತು
  • 13 ವರ್ಷಗಳ ಬಳಿಕ ಅರುಣಾಚಲ ಪ್ರದೇಶಕ್ಕೆ ಮರಳಿದ ಬುದ್ಧನ ಅವಶೇಷಗಳು; ದರ್ಶನಕ್ಕಾಗಿ ತವಾಂಗ್ ಮಠಕ್ಕೆ ಹರಿದುಬಂದ ಭಕ್ತ ಸಾಗರ
Copyright 2026 — ANU News. All rights reserved. Blogsy WordPress Theme