Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಕುವೈತ್ ಡ್ರೋನ್ ದಾಳಿ ಖಂಡಿಸಿದ ವಿಶ್ವಸಂಸ್ಥೆ; ಇರಾನ್‌ ನಡೆಗೆ ಆಕ್ಷೇಪ

By ANU News
November 28, 2026 1 Min Read
Comments Off on ಕುವೈತ್ ಡ್ರೋನ್ ದಾಳಿ ಖಂಡಿಸಿದ ವಿಶ್ವಸಂಸ್ಥೆ; ಇರಾನ್‌ ನಡೆಗೆ ಆಕ್ಷೇಪ

ಕುವೈತ್: ಕುವೈತ್‌ನಲ್ಲಿ ನಡೆದ ಡ್ರೋನ್ ದಾಳಿಯನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಇಟಲಿ ಪ್ರಜೆಗಳು ಮೃತಪಟ್ಟಿದ್ದು, ಕುವೈತ್ ಮತ್ತು ಪಾಕಿಸ್ತಾನದ ತಲಾ ಒಬ್ಬರು ಗಾಯಗೊಂಡಿದ್ದಾರೆ.

ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗುಟೆರಸ್, ಸಂಯಮ ಕಾಯ್ದುಕೊಂಡು ಮಾತುಕತೆ ಮೂಲಕ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.

ದಾಳಿಗೆ ಇರಾನ್ ಹೊಣೆ ಎಂದು ಆರೋಪಿಸಿರುವ ಕುವೈತ್, ಇರಾನ್ ರಾಯಭಾರಿ ಮೊಹಮ್ಮದ್ ತೊಟೊಂಚಿ ಅವರನ್ನು ಕರೆಸಿ ಅಧಿಕೃತ ಪ್ರತಿಭಟನಾ ಪತ್ರ ಸಲ್ಲಿಸಿದೆ. ಕುವೈತ್ ಸಾರ್ವಭೌಮತ್ವ ಉಲ್ಲಂಘನೆಯಾಗಿದ್ದು, ದೇಶದ ಭದ್ರತೆಗಾಗಿ ಸ್ವಯಂ ರಕ್ಷಣೆಯ ಹಕ್ಕು ಕಾಯ್ದಿರಿಸಿರುವುದಾಗಿ ಎಚ್ಚರಿಸಿದೆ.

ಆದರೆ, ದಾಳಿಯಲ್ಲಿ ಇರಾನ್ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ದಾಳಿಯ ಮೂಲ ಪತ್ತೆಹಚ್ಚಲು ಜಂಟಿ ತನಿಖೆ ನಡೆಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ.

Author

ANU News

Follow Me
Other Articles
Previous

Alternative Fuel Research Must Reach Public, Says V.K. Saraswat

Next

UN Chief Condemns Kuwait Drone Attack; Iran Denies Role

Recent Posts

  • UN Chief Condemns Kuwait Drone Attack; Iran Denies Role
  • ಕುವೈತ್ ಡ್ರೋನ್ ದಾಳಿ ಖಂಡಿಸಿದ ವಿಶ್ವಸಂಸ್ಥೆ; ಇರಾನ್‌ ನಡೆಗೆ ಆಕ್ಷೇಪ
  • Alternative Fuel Research Must Reach Public, Says V.K. Saraswat
  • ಪರ್ಯಾಯ ಇಂಧನ ಸಂಶೋಧನೆ ಜನರಿಗೆ ತಲುಪಲಿ: ಡಾ. ವಿ.ಕೆ. ಸರಸ್ವತ್
  • IIT Bombay: Munish Moudgil Calls Constitution India’s ‘Foundational Algorithm’
Copyright 2026 — ANU News. All rights reserved. Blogsy WordPress Theme