Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಕಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ; 15 ವರ್ಷದ ವೈಭವ್’ಗೆ ಟಿ20 ತಂಡದ ನಾಯಕತ್ವ

By ANU News
November 7, 2026 1 Min Read
Comments Off on ಕಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ; 15 ವರ್ಷದ ವೈಭವ್’ಗೆ ಟಿ20 ತಂಡದ ನಾಯಕತ್ವ

ಪಾಟ್ನಾ: ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರಿಗೆ ಬಿಹಾರ ಟಿ20 ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ನವೆಂಬರ್ 14ರಿಂದ ಡಿಸೆಂಬರ್ 6ರವರೆಗೆ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಬಿಹಾರ ತಂಡ ಪ್ರಕಟವಾಗಿದ್ದು, 15 ವರ್ಷದ ವೈಭವ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಸೂರಜ್ ಕಶ್ಯಪ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಪ್ರಮುಖ ದೇಶೀಯ ಟಿ20 ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಅತ್ಯಂತ ಕಿರಿಯ ಆಟಗಾರರ ಸಾಲಿಗೆ ವೈಭವ್ ಸೇರ್ಪಡೆಯಾಗಲಿದ್ದಾರೆ. ಈ ಹಿಂದೆ ದುಲೀಪ್ ಟ್ರೋಫಿಯಲ್ಲೂ ಅವರು ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದರು.

15ನೇ ವಯಸ್ಸಿನಲ್ಲೇ ಬಿಹಾರ ತಂಡದ ನಾಯಕತ್ವ ವಹಿಸಿರುವ ವೈಭವ್, ಈ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.

ಬಿಹಾರ ತಂಡ: ವೈಭವ್ ಸೂರ್ಯವಂಶಿ (ನಾಯಕ), ಸೂರಜ್ ಕಶ್ಯಪ್ (ಉಪನಾಯಕ), ಆಯುಷ್ ಲೋಹರುಕ, ಅನ್ಮೋಲ್ ಕುಮಾರ್, ಅಲೋಕ್ ಕುಮಾರ್, ಅಲ್ತಮಶ್ ಅಶ್ರಫ್, ಪರಮ್ ಕುಮಾರ್ ಸಿಂಗ್, ರಿತ್ವಿಕ್ ರಾಜ್, ಮಯಾಂಕ್ ಕುಮಾರ್, ರಾಘವೇಂದ್ರ ಪ್ರತಾಪ್, ಆಶಿಶ್ ಕುಮಾರ್, ವಾಸುದೇವ್ ಪ್ರತಾಪ್, ನವಾಜ್ ಖಾನ್ ಮತ್ತು ಹಿಮಾಂಶು ಸಿಂಗ್.

Author

ANU News

Follow Me
Other Articles
Previous

Yemen: 30 Killed, 8 Injured in Airstrikes on Taiz Market

Next

Vaibhav Suryavanshi Set for Record-Breaking Captaincy Stint at Just 15

Recent Posts

  • Vaibhav Suryavanshi Set for Record-Breaking Captaincy Stint at Just 15
  • ಕಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ; 15 ವರ್ಷದ ವೈಭವ್’ಗೆ ಟಿ20 ತಂಡದ ನಾಯಕತ್ವ
  • Yemen: 30 Killed, 8 Injured in Airstrikes on Taiz Market
  • ಯೆಮೆನ್‌ನ ತೈಜ್ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು
  • Diwali 2026: K’taka minister Ramalinga Reddy Appeals to Public to Use Only Green Crackers
Copyright 2026 — ANU News. All rights reserved. Blogsy WordPress Theme