Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿಶ್ವದಾಖಲೆಗಳು ಧೂಳೀಪಟ; ಒಂದೇ ಪಂದ್ಯದಲ್ಲಿ ಆರು ದಾಖಲೆ!

By ANU News
November 25, 2026 1 Min Read
Comments Off on ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿಶ್ವದಾಖಲೆಗಳು ಧೂಳೀಪಟ; ಒಂದೇ ಪಂದ್ಯದಲ್ಲಿ ಆರು ದಾಖಲೆ!

ದುಬೈ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಎ ತಂಡದ ವೈಭವ್ ಸೂರ್ಯವಂಶಿ ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ಮುರಿದಿದ್ದಾರೆ.

ಕೇವಲ 53 ಎಸೆತಗಳಲ್ಲಿ ಅಜೇಯ 204 ರನ್ ಸಿಡಿಸಿದ ವೈಭವ್, 28 ಎಸೆತಗಳಲ್ಲಿ ಶತಕ ಪೂರೈಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು. ಈ ಹಿಂದೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 29 ಎಸೆತಗಳಲ್ಲಿ ಶತಕ ಗಳಿಸಿದ್ದು ದಾಖಲೆಯಾಗಿತ್ತು.

40 ಎಸೆತಗಳಲ್ಲಿ 150 ರನ್ ಗಳಿಸಿದ ಅವರು, ತಮ್ಮದೇ ಹಿಂದಿನ 59 ಎಸೆತಗಳ ದಾಖಲೆಯನ್ನು ಮುರಿದರು. 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ ಹೆಸರಿನಲ್ಲಿದ್ದ 103 ಎಸೆತಗಳ ದಾಖಲೆಯನ್ನು ಹಿಂದಿಕ್ಕಿದರು.

ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್ ಸಿಡಿಸಿದ ವೈಭವ್, ಡಾರ್ಸಿ ಶಾರ್ಟ್ ಅವರ 23 ಸಿಕ್ಸರ್‌ಗಳ ದಾಖಲೆಯನ್ನೂ ಮುರಿದರು. ಏಕದಿನ ಇನ್ನಿಂಗ್ಸ್‌ನಲ್ಲಿ ತಂಡವೊಂದು ಗಳಿಸಿದ್ದ ಗರಿಷ್ಠ 26 ಸಿಕ್ಸರ್‌ಗಳ ದಾಖಲೆಯನ್ನೂ ಹಿಂದಿಕ್ಕಿದರು. ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ 26 ಸಿಕ್ಸರ್ ಬಾರಿಸಿದ್ದು ಹಿಂದಿನ ದಾಖಲೆಯಾಗಿತ್ತು.

ಭಾರತ ಎ ತಂಡ ಒಟ್ಟಾರೆ 31 ಸಿಕ್ಸರ್ ಸಿಡಿಸಿ ಮತ್ತೊಂದು ದಾಖಲೆ ನಿರ್ಮಿಸಿತು. ವೈಭವ್ ಅವರ ಸ್ಫೋಟಕ ಆಟದ ನೆರವಿನಿಂದ 250 ರನ್‌ಗಳ ಗುರಿಯನ್ನು ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತು. 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಇಷ್ಟು ಕಡಿಮೆ ಓವರ್‌ಗಳಲ್ಲಿ ಬೆನ್ನಟ್ಟಿರುವುದು ಲಿಸ್ಟ್ ಎ ಕ್ರಿಕೆಟ್‌ನ ಹೊಸ ದಾಖಲೆಯಾಗಿದೆ. ಈ ಹಿಂದೆ ಇಂತಹ ಗುರಿಯನ್ನು 20 ಓವರ್‌ಗಳಲ್ಲಿ ಬೆನ್ನಟ್ಟಿದ್ದು ದಾಖಲೆಯಾಗಿತ್ತು.

Author

ANU News

Follow Me
Other Articles
Previous

Modi Welcomes Shiromani Akali Dal into NDA, Calls Alliance ‘Natural’

Next

Women’s Hockey: India Thrash China 6-2 for Fourth Straight Win in Asian Champions Trophy

Recent Posts

  • Women’s Hockey: India Thrash China 6-2 for Fourth Straight Win in Asian Champions Trophy
  • ವೈಭವ್ ಸೂರ್ಯವಂಶಿ ಅಬ್ಬರಕ್ಕೆ ವಿಶ್ವದಾಖಲೆಗಳು ಧೂಳೀಪಟ; ಒಂದೇ ಪಂದ್ಯದಲ್ಲಿ ಆರು ದಾಖಲೆ!
  • Modi Welcomes Shiromani Akali Dal into NDA, Calls Alliance ‘Natural’
  • ಶಿರೋಮಣಿ ಅಕಾಲಿದಳ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಗೆ ಮೋದಿ ಸಂತಸ
  • Karnataka Plans Single Digital Platform for Urban Local Body Services
Copyright 2026 — ANU News. All rights reserved. Blogsy WordPress Theme