Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶಪ್ರಾದೇಶಿಕ

ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಅವರ ಇಲಾಖೆಯ ಸಾಧನೆಯೇ ಶ್ರೇಷ್ಠ !

By ANU News
May 24, 2026 1 Min Read
0

ನವದೆಹಲಿ, (ANU): ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಮೌಲ್ಯಮಾಪನದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಮುನ್ನಡೆಸುತ್ತಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ ಮೊದಲ ಸ್ಥಾನ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ (B. Y. Vijayendra) ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಪ್ರಲ್ಹಾದ್ ಜೋಶಿ ಅವರ ನಾಯಕತ್ವದಲ್ಲಿ ಸಚಿವಾಲಯವು ಸಾರ್ವಜನಿಕ ಕುಂದುಕೊರತೆಗಳ ತ್ವರಿತ ಪರಿಹಾರ, ಫೈಲ್ ವಿಲೇವಾರಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಉತ್ತಮ ಆಡಳಿತ” ದೃಷ್ಟಿಕೋನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸಚಿವಾಲಯ ಯಶಸ್ವಿಯಾಗಿದೆ. ಇದು ಪ್ರಲ್ಹಾದ್ ಜೋಶಿ ಅವರ ಸಮರ್ಪಿತ ಆಡಳಿತ, ಪರಿಣಿತಿ ಮತ್ತು ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ದೊರೆತಿರುವ ಈ ಮನ್ನಣೆ, ಪ್ರಲ್ಹಾದ್ ಜೋಶಿ ಅವರ ಪ್ರಾಮಾಣಿಕ ಪ್ರಯತ್ನ ಹಾಗೂ ನಾಯಕತ್ವದ ಪ್ರತಿಫಲವಾಗಿದೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಗೌರವವನ್ನು ಹೆಚ್ಚಿಸುವಲ್ಲಿ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಗೌರವಾನ್ವಿತ ಪ್ರಧಾನಿ ಶ್ರೀ @narendramodi ಜೀ ರವರ ನೇತೃತ್ವದ ಕೇಂದ್ರ ಸರ್ಕಾರದ ಇಲಾಖೆಗಳ ಪ್ರಗತಿ ಪರಿಶೀಲನಾ ಮೌಲ್ಯಮಾಪನದಲ್ಲಿ, ನಮ್ಮ ಹಿರಿಯ ನಾಯಕರು, ರಾಜ್ಯದವರೇ ಆಗಿರುವ ಕೇಂದ್ರ ಸಚಿವ ಶ್ರೀ @JoshiPralhad ರವರು ನಿರ್ವಹಿಸುತ್ತಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮೊದಲ ಸ್ಥಾನದಲ್ಲಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ… pic.twitter.com/lTuc16vSgC

— Vijayendra Yediyurappa (@BYVijayendra) May 24, 2026

Author

ANU News

Follow Me
Other Articles
Previous

ಆನೇಕಲ್‌ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದೆ ಕಮಿಶನ್‌ ರಾಜಕೀಯ?

Next

ಎಬೋಲಾ ತಲ್ಲಣ: ಆಫ್ರಿಕಾ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ ಎಂದು ಭಾರತ ಸಲಹೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸಕ್ಕರೆ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
    • Sugar prices spark political row: Kharge questions Centre, govt rejects ethanol link
    • 3. Pellet gun case: Priyank Kharge questions delay in filing FIR
    • ಪೆಲೆಟ್ ಗನ್ ಪ್ರಕರಣ: ರಾಹುಲ್ 8 ಗಂಟೆ ಧರಣಿ ದುರದೃಷ್ಟಕರ: ಪ್ರಿಯಾಂಕ್ ಖರ್ಗೆ
    • ‘Phoenix’ film row: Om Prakash Rao accused of not returning ₹3.85 crore
    Copyright 2026 — ANU News. All rights reserved. Blogsy WordPress Theme