Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶಪ್ರಾದೇಶಿಕ

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಸುರ್ಜೇವಾಲ

By ANU News
May 5, 2026 1 Min Read
0

ಬೆಂಗಳೂರು: ಕರ್ನಾಟಕದ ಹೈವೋಲ್ಟೇಜ್ ಕದನ ಎಂದೇ ಬಿಂಬಿತವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಪಾರುಪತ್ಯವನ್ನು ಮೆರೆದಿದೆ. ಈ ಗೆಲುವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು “ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ.

ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ಅವರು ಬಿಜೆಪಿಯನ್ನು ಮಣಿಸಿ ವಿಜಯಮಾಲೆ ಧರಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡಿದ ಸಮ್ಮತಿಯಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಗ್ಯಾರಂಟಿಗಳ ಜಯ, ಪ್ರತಿಯೊಬ್ಬ ಕನ್ನಡಿಗನ ಜಯ, ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ, ಕಾಂಗ್ರೆಸ್ ಕಾರ್ಯಕರ್ತರ ಜಯ ಎಂದು ಬಣ್ಣಿಸಿದ್ದಾರೆ.

ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ನಾಯಕತ್ವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸಂಘಟಿತ ಹೋರಾಟಕ್ಕೆ ಸಂದ ಗೆಲುವಾಗಿದೆ. ಇನ್ನು ನೆಲಮಟ್ಟದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳ ಶ್ರಮಕ್ಕೆ ಸಿಕ್ಕ ಜಯ ಎಂಬುದಾಗಿ ಸುರ್ಜೇವಾಲ ಶ್ಲಾಘಿಸಿದ್ದಾರೆ. ಕೆಳಮಟ್ಟದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿದ್ದಾರೆ.

Author

ANU News

Follow Me
Other Articles
Previous

ಕೇರಳದಲ್ಲಿ ಕೈ ಮೇಲುಗೈ, ಆಡಳಿತಾರೂಢ ಎಲ್​ಡಿಎಫ್’ಗೆ ಸೋಲು; ಅಂತಿಮ ಬಲಾಬಲ ಹೀಗಿದೆ

Next

UDF Storms Back to Power in Kerala; LDF Suffers Crushing Defeat

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme