Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರಾಜ್ಯದ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ 2026–27ನೇ ಸಾಲಿನ ಯಾನಕ್ಕೆ ಚಾಲನೆ

By ANU News
October 24, 2026 1 Min Read
0

ಬೆಂಗಳೂರು: ಕರ್ನಾಟಕದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ವನ್ಯಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯದ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ)ದ 2026–27ನೇ ಸಾಲಿನ ಯಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು. ಈ ಋತುವಿನ ಮೊದಲ ಯಾನಕ್ಕೆ ‘ಪ್ರೈಡ್ ಆಫ್ ಕರ್ನಾಟಕ’ ಎಂದು ಹೆಸರಿಡಲಾಗಿದ್ದು, ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿದೆ. ಒಟ್ಟು 75 ಪ್ರವಾಸಿಗರು ಈ ಯಾನದ ಮೂಲಕ ನಾಡಿನ ಐತಿಹಾಸಿಕ ತಾಣಗಳು, ವನ್ಯಜೀವಿ ಸಂಪತ್ತು, ಪ್ರಕೃತಿ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ.

2026–27ನೇ ಸಾಲಿನಲ್ಲಿ ಒಟ್ಟು 13 ಯಾನಗಳನ್ನು ಆಯೋಜಿಸಲಾಗಿದೆ. ವಿಶ್ವದರ್ಜೆಯ ಐಷಾರಾಮಿ ಪ್ರವಾಸೋದ್ಯಮದ ಮೂಲಕ ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ರಾಜ್ಯದ ಪ್ರಯತ್ನಕ್ಕೆ ಈ ಯೋಜನೆ ಮತ್ತಷ್ಟು ಬಲ ನೀಡಲಿದೆ.

ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ನೈಸರ್ಗಿಕ ಸೊಬಗನ್ನು ವಿಶ್ವದ ಪ್ರವಾಸಿಗರಿಗೆ ಪರಿಚಯಿಸಿ, ರಾಜ್ಯವನ್ನು ಪ್ರಮುಖ ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಸರ್ಕಾರದ ಸಂಕಲ್ಪವಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಯ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜತೆಗೆ ರಾಜ್ಯದ ಆರ್ಥಿಕ ಪ್ರಗತಿಗೂ ವೇಗ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Author

ANU News

Follow Me
Other Articles
Previous

Golden Chariot Luxury Train Begins 2026-27 Season to Showcase Karnataka’s Heritage

Next

4,000ಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣೆ: ಡಾ. ಕೆ. ಸುಧಾಕರ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka Announces Maharshi Valmiki Awards for 10 Achievers for 2026–27
    • 10 ಸಾಧಕರಿಗೆ 2026-27ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಣೆ
    • ‘ಮತ ಉಳಿಸಿ, ದೇಶ ಉಳಿಸಿ’ ಅಭಿಯಾನಕ್ಕೆ ಮಂಗಳೂರಿನಲ್ಲಿ ಚೈತನ್ಯ ತುಂಬಿದ ಸಿಡಬ್ಲ್ಯುಸಿ ಸದಸ್ಯ ಕಮಲೇಶ್ವರ್ ಪಟೇಲ್
    • Vote Bachao, Desh Bachao’: Congress mobilises coastal Karnataka ahead of Delhi rally
    • ಅನುಪಮ್ ಖೇರ್ 556ನೇ ಸಿನಿಮಾ ‘ಔಟ್ ಆಫ್ ಫ್ಯಾಷನ್’; ಸ್ವೀಡಿಷ್-ಬೆಲ್ಜಿಯಂ ಸಹನಿರ್ಮಾಣದ ಚಿತ್ರ
    Copyright 2026 — ANU News. All rights reserved. Blogsy WordPress Theme