Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ವಾಹನ ಸವಾರರಿಗೆ ಸಿಹಿಸುದ್ದಿ: ಸಂಚಾರ ದಂಡದಲ್ಲಿ ಮತ್ತೆ 50% ರಿಯಾಯಿತಿ

By Anu News
June 5, 2026 1 Min Read
0

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸುವರ್ಣಾವಕಾಶ ನೀಡಿದೆ. ಬಾಕಿ ದಂಡದ ಮೊತ್ತದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ಜೂನ್ 21ರಿಂದ ಜುಲೈ 10ರವರೆಗೆ ಈ ಸೌಲಭ್ಯ ಲಭ್ಯವಾಗಲಿದೆ.

ಸಂಚಾರ ದಂಡ ಕಟ್ಟಲು ಸಾಧ್ಯವಾಗದೆ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರ ಹಿತದೃಷ್ಟಿಯಿಂದ ಸಾರಿಗೆ ಮತ್ತು ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ ನವೆಂಬರ್‌ನಲ್ಲೂ ಇದೇ ರೀತಿಯ ರಿಯಾಯಿತಿ ನೀಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪೊಲೀಸ್ ಇಲಾಖೆಯ ಇ-ಚಲನ್ ವ್ಯವಸ್ಥೆಯಲ್ಲಿ 2026ರ ಮೇ ತಿಂಗಳಿಗಿಂತ ಮೊದಲು ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರವರೆಗೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.

ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ದಂಡ ಪಾವತಿಸಿದರೆ ಅರ್ಧ ಮೊತ್ತವನ್ನು ಮಾತ್ರ ಪಾವತಿಸಬಹುದಾಗಿದೆ.

ಸಾರ್ವಜನಿಕರು ಅಸ್ತ್ರಂ ಆ್ಯಪ್, ಕೆಎಸ್‌ಪಿಎಸ್ ಆ್ಯಪ್ ಹಾಗೂ ರಾಜ್ಯದ ವಿವಿಧ ಕರ್ನಾಟಕ ಒನ್ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದು ಎಂದು ಸರ್ಕಾರ ತಿಳಿಸಿದೆ.

ಬಾಕಿ ಸಂಚಾರ ದಂಡಗಳನ್ನು ಕಡಿಮೆ ವೆಚ್ಚದಲ್ಲಿ ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಲು ವಾಹನ ಸವಾರರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Author

Anu News

Follow Me
Other Articles
Previous

ಡಿಕೆ ಶಿವಕುಮಾರ್ ಸಂಪುಟಕ್ಕೆ ಖಾತೆ ಹಂಚಿಕೆ: ಡಿಸಿಎಂ ಪರಮೇಶ್ವರ್’ಗೆ ಕಂದಾಯ ಇಲಾಖೆ

Next

ರೌಡಿಸಂಗೆ ಡಿಕೆಶಿ ಬ್ರೇಕ್: ಪ್ರತಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಸ್ಕ್ವಾಡ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Bengaluru gets 45-acre urban forest at Panathur; more large parks planned: Minister Ramalinga Reddy
    • ಪಣತೂರಿನಲ್ಲಿ 45 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನ ಲೋಕಾರ್ಪಣೆ: ರಾಜಧಾನಿಯಲ್ಲಿ ಮತ್ತಷ್ಟು ಬೃಹತ್ ಉದ್ಯಾನವನ; ರಾಮಲಿಂಗಾರೆಡ್ಡಿ
    • ₹3 ಲಕ್ಷದವರೆಗಿನ ರಫ್ತು ಸರಕುಗಳಿಗೆ RCMC ಕಡ್ಡಾಯದಿಂದ ವಿನಾಯಿತಿ: MSME, ಕುಶಲಕರ್ಮಿಗಳು ಹಾಗೂ ಮೊದಲ ಬಾರಿಗೆ ರಫ್ತು ಮಾಡುವವರಿಗೆ ಅನುಕೂಲ
    • Govt eases RCMC requirement for export consignments up to Rs 3 lakh
    • EPFO ವೇತನ ಮಿತಿ ₹25 ಸಾವಿರಕ್ಕೆ ಏರಿಕೆ: 51 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಗೆ
    Copyright 2026 — ANU News. All rights reserved. Blogsy WordPress Theme