Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಲು ಕಾಂಗ್ರೆಸ್ ಯತ್ನ ಎಂದ ಬಿಜೆಪಿ

By Anu News
June 15, 2026 1 Min Read
0

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಲು ಆರಂಭಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರಸಗೊಬ್ಬರ ಪೂರೈಕೆಯಾದರೂ ರಾಜ್ಯ ಸರ್ಕಾರ ಅಗತ್ಯವಿರುವಲ್ಲಿ ರೈತರಿಗೆ ರಸಗೊಬ್ಬರ ತಲುಪಿಸದೆ ತೀರಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಜನವರಿ-ಮಾರ್ಚ್ ಅವಧಿಯಲ್ಲೇ ಅಗತ್ಯಕ್ಕಿಂತ ಹೆಚ್ಚುವರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ ಅನ್ನು ರಾಜ್ಯಕ್ಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅದಾಗಲೇ ಜೂನ್‌ 10 ರ ವರೆಗೆ ಯೂರಿಯಾ 3.13 ಲಕ್ಷ ಮೆಟ್ರಿಕ್‌ ಟನ್‌ (LMT) ಅಗತ್ಯತೆಯಲ್ಲಿ 5.59 LMT ಲಭ್ಯತೆಯನ್ನು ಖಾತರಿಪಡಿಸಿದೆ. ಡಿಎಪಿ 1.89 LMT ಅಗತ್ಯತೆಯಲ್ಲಿ 2.57 LMT ಲಭ್ಯತೆ ಖಚಿತಪಡಿಸಿದ್ದು, ಪ್ರಸ್ತುತ ದಾಸ್ತಾನು 1.09 LMT ಇದೆ. ಹೆಚ್ಚುವರಿ ರಸಗೊಬ್ಬರ ಪೂರೈಕೆಯಲ್ಲಿದೆ. ಎನ್‌ಪಿಕೆಎಸ್: 4.36 LMT ಅಗತ್ಯತೆಯಿದ್ದರೆ 9.28 LMT ಲಭ್ಯತೆ ಖಾತರಿಪಡಿಸಲಾಗಿತ್ತು. ಗಣನೀಯ ಪ್ರಮಾಣದ ಮಾರಾಟದ ನಂತರವೂ 5.6 ಲಕ್ಷ LMTಗೂ ಹೆಚ್ಚು ರಸಗೊಬ್ಬರ ಲಭ್ಯವಿದೆ ಎಂದು ಬಿಜೆಪಿ ತನ್ನ X ಖಾತೆಯಲ್ಲಿ ಬರೆದುಕೊಂಡಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ವಿವಿಧ ಜಿಲ್ಲೆಗಳ ನಡುವೆ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡದೆ, ದಾಸ್ತಾನು ದಂಧೆ, ಕಾಳ‌ಸಂತೆ ತಡೆಗಟ್ಟದೇ ರೈತರಿಗೆ ವಂಚಿಸುತ್ತಿದೆ. ಈ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಭಾಗಿಯಾದಂತೆ ಕಾಣುತ್ತಿದೆ ಎಂದು ಬಿಜೆಪಿ ಹೇಳಿದೆ.

ರಾಜ್ಯದ @INCKarnataka ಸರ್ಕಾರ ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಲು ಆರಂಭಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರಸಗೊಬ್ಬರ ಪೂರೈಕೆಯಾದರೂ ರಾಜ್ಯ ಸರ್ಕಾರ ಅಗತ್ಯವಿರುವಲ್ಲಿ ರೈತರಿಗೆ ರಸಗೊಬ್ಬರ ತಲುಪಿಸದೆ ತೀರಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ.

ಜನವರಿ-ಮಾರ್ಚ್ ಅವಧಿಯಲ್ಲೇ… pic.twitter.com/oNmDtn3bft

— BJP Karnataka (@BJP4Karnataka) June 15, 2026

Author

Anu News

Follow Me
Other Articles
Previous

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ ಸಾಧ್ಯತೆ

Next

2-3 ದಿನ ರಾಜ್ಯದಲ್ಲಿ ವರುಣಾರ್ಭಟ ಸಾಧ್ಯತೆ; ಬೆಂಗಳೂರಿನಲ್ಲೂ ಮಳೆ ಸಂಭವ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಹುತ್ವ, ಸಂವಿಧಾನದ ಆಶಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಬಿ.ಕೆ. ಹರಿಪ್ರಸಾದ್
    • ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ: ಕೇಂದ್ರಕ್ಕೆ ಲಡಾಖ್ ಸಂಘಟನೆಗಳ ಎಚ್ಚರಿಕೆ
    • Ladakh body warns of intensified agitation if Centre fails to make ‘clear progress
    • Civic apathy won’t be tolerated, says Krishna Byre Gowda during surprise Bengaluru inspectio
    • ನಾಗರಿಕ ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಕ್ರಮ: ಕೃಷ್ಣ ಬೈರೇಗೌಡ
    Copyright 2026 — ANU News. All rights reserved. Blogsy WordPress Theme