Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಜಗತ್ತಿನ ಹಲವೆಡೆ ಎಬೋಲಾ ತಲ್ಲಣ; ಭಾರತದಲ್ಲೂ ಹೈ ಅಲರ್ಟ್

By ANU News
May 25, 2026 1 Min Read
0

ನವದೆಹಲಿ: ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಸೋಮವಾರ ದೇಶದ ಸನ್ನದ್ಧತೆ ಮತ್ತು ಕಣ್ಗಾವಲು ಕ್ರಮಗಳ ಪರಿಶೀಲನಾ ಸಭೆ ನಡೆಸಿದರು.

ಬುಂಡಿಬುಗ್ಯೊ ತಳಿಯ ಎಬೋಲಾ ಸೋಂಕಿನ ಯಾವುದೇ ಪ್ರಕರಣ ಭಾರತದಲ್ಲಿ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಈ ಸೋಂಕನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಡಿಜಿಎಚ್‌ಎಸ್‌, ನಾಗರಿಕ ವಿಮಾನಯಾನ ಮತ್ತು ವಲಸೆ ಅಧಿಕಾರಿಗಳ ಸಹಯೋಗದಲ್ಲಿ ದೇಶಾದ್ಯಂತ ಕಣ್ಗಾವಲು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಪ್ರವೇಶ ಬಿಂದುಗಳಲ್ಲಿ ತಪಾಸಣೆ ಮತ್ತು ನಿಗಾವ್ಯವಸ್ಥೆ ಹೆಚ್ಚಿಸಲಾಗಿದ್ದು, ಸೋಂಕು ತಪಾಸಣೆ, ಕ್ವಾರಂಟೈನ್‌, ಪ್ರಯೋಗಾಲಯ ಪರೀಕ್ಷೆ, ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ಟ್ರ್ಯಾಕಿಂಗ್‌, ಪರೀಕ್ಷೆ ಹಾಗೂ ಕಣ್ಗಾವಲು ವ್ಯವಸ್ಥೆಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಆರೋಗ್ಯ ಅಧಿಕಾರಿಗಳಿಗೆ ನಡ್ಡಾ ಸೂಚನೆ ನೀಡಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡಾ ಮತ್ತು ದಕ್ಷಿಣ ಸುಡಾನ್ಗಳಿಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯರಿಗೆ ಸಲಹೆ ನೀಡಿತ್ತು.

Author

ANU News

Follow Me
Other Articles
Previous

India on high alert over Ebola outbreak; Nadda reviews preparedness measures

Next

Bengaluru-Tumakuru Metro DPR submitted; 60-km corridor planned under PPP model

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬ ಸಹಿಸುವುದಿಲ್ಲ: ಚಲುವರಾಯಸ್ವಾಮಿ
    • Bengaluru gets its first ‘Circular Textile Lab’ to turn textile waste into useful products
    • ಬೆಂಗಳೂರಿನ ಮೊದಲ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಲೋಕಾರ್ಪಣೆ
    • Horror, humour and a mysterious bus: Shine Shetty’s ‘Shankarabharana’ teaser unveiled
    • ಶೈನ್ ಶೆಟ್ಟಿಗೆ ಬಸ್ ಡ್ರೈವರ್ ಅವತಾರ; ‘ಶಂಕರಾಭರಣ’ ಟೀಸರ್ ರಿಲೀಸ್
    Copyright 2026 — ANU News. All rights reserved. Blogsy WordPress Theme