Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಪ್ರಧಾನಿ ಮನವಿ ಹಿನ್ನೆಲೆ ‘ವಾಹನ ರಹಿತ ದಿನ’ ಆಚರಣೆಗೆ ಬಿಹಾರ ಸಿಎಂ ಕರೆ

By ANU News
May 16, 2026 1 Min Read
0

ಪಾಟ್ನಾ: ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಹಿನ್ನೆಲೆ ಬಿಹಾರದಲ್ಲಿ ‘ವಾಹನ ರಹಿತ ದಿನ’ ಆಚರಿಸಲಾಯಿತು. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಚಿವಾಲಯಕ್ಕೆ ಶುಕ್ರವಾರ ನಡೆದುಕೊಂಡು ತೆರಳಿ ಇಂಧನ ಸಂರಕ್ಷಣೆಯ ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದಿಂದ ಸಚಿವಾಲಯದವರೆಗೆ ಸುಮಾರು 150 ಮೀಟರ್ ನಡೆದುಕೊಂಡು ಹೋದ ಅವರು, ಈಗಾಗಲೇ ಅಧಿಕೃತ ಸಂಚಾರದ ವೇಳೆ ತಮ್ಮ ಬೆಂಗಾವಲಿನ ಗಾತ್ರವನ್ನೂ ಕಡಿಮೆ ಮಾಡಿದ್ದಾರೆ. ಅವರೊಂದಿಗೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯೂ ಭಾಗಿಯಾಗಿದ್ದರು.

ಪಂಚಾಯತ್ ರಾಜ್ ಸಚಿವ ದೀಪಕ್ ಪ್ರಕಾಶ್ ಕೂಡ ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಕಚೇರಿಗೆ ತೆರಳಿದರು. ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ನಡುವೆ ಇಂಧನ ಉಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಇ-ರಿಕ್ಷಾದಲ್ಲಿ ಕಚೇರಿಗೆ ತೆರಳಿ ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡಿದರು. “ಇಂಧನ ಉಳಿಸುವ ಸಂದೇಶ ನೀಡಲು ಇ-ರಿಕ್ಷಾ ಬಳಸಿದ್ದೇವೆ” ಎಂದು ಹೇಳಿದರು.

ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೈಕಲ್‌ನಲ್ಲಿ ಕಚೇರಿಗೆ ತೆರಳಿದರೆ, ಗಯಾದಲ್ಲಿ ಭದ್ರತಾ ಸಿಬ್ಬಂದಿಯೂ ಸೈಕಲ್ ಬಳಸಿದರು. ಆರೋಗ್ಯ ಮತ್ತು ಇಂಧನ ಉಳಿತಾಯ ಎರಡಕ್ಕೂ ಇದು ಸಹಕಾರಿ ಎಂದು ಅಧಿಕಾರಿಗಳು ತಿಳಿಸಿದರು.

Author

ANU News

Follow Me
Other Articles
Previous

ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

Next

ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್‌, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಹುತ್ವ, ಸಂವಿಧಾನದ ಆಶಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಬಿ.ಕೆ. ಹರಿಪ್ರಸಾದ್
    • ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ: ಕೇಂದ್ರಕ್ಕೆ ಲಡಾಖ್ ಸಂಘಟನೆಗಳ ಎಚ್ಚರಿಕೆ
    • Ladakh body warns of intensified agitation if Centre fails to make ‘clear progress
    • Civic apathy won’t be tolerated, says Krishna Byre Gowda during surprise Bengaluru inspectio
    • ನಾಗರಿಕ ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಕ್ರಮ: ಕೃಷ್ಣ ಬೈರೇಗೌಡ
    Copyright 2026 — ANU News. All rights reserved. Blogsy WordPress Theme