Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಿಎಂಟಿಸಿ ಮಾಸಿಕ ಪಾಸ್ ದರ ಏರಿಕೆ ಇಲ್ಲ; ವಿಸ್ತಾರ ಮಾರ್ಗಗಳಿಗೆ ಮಾತ್ರ ಹೊಸ ಪಾಸ್

By ANU News
June 23, 2026 1 Min Read
0

ಬೆಂಗಳೂರು: ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸ್ ದರವನ್ನು ಹೆಚ್ಚಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ನಗರ ಹೊರವಲಯದ ವಿಸ್ತರಿತ ಮಾರ್ಗಗಳಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಮಾತ್ರ ‘ಸಾಮಾನ್ಯ ವಿಸ್ತಾರ’ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್‌ಗಳನ್ನು ಪರಿಚಯಿಸಲಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಿಂದ 40 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ. ಇದರ ಪರಿಣಾಮವಾಗಿ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ಸೇರಿದಂತೆ ಹಲವು ನಗರ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಬಸ್ ಸೇವೆ ವಿಸ್ತರಿಸಲಾಗಿದೆ.

ಹೊಸ ವ್ಯವಸ್ಥೆಯಲ್ಲಿ ನಗರ ಕೇಂದ್ರದಿಂದ 40 ಕಿ.ಮೀ.ವರೆಗಿನ ಪ್ರದೇಶವನ್ನು ‘ಸೀಮಿತ ವ್ಯಾಪ್ತಿ’ ಹಾಗೂ ಅದರಾಚೆಗಿನ ಪ್ರದೇಶವನ್ನು ‘ವಿಸ್ತಾರ ವ್ಯಾಪ್ತಿ’ ಎಂದು ವರ್ಗೀಕರಿಸಲಾಗಿದೆ. ಸೀಮಿತ ವ್ಯಾಪ್ತಿಯ ಪ್ರಯಾಣಿಕರಿಗೆ ಈಗಿರುವ ಎಲ್ಲಾ ಪಾಸ್‌ಗಳು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತವೆ.

ವಿಸ್ತಾರ ವ್ಯಾಪ್ತಿಯ ಪ್ರಯಾಣಿಕರಿಗಾಗಿ 2026ರ ಜೂನ್ 2ರಿಂದ ‘ಸಾಮಾನ್ಯ ವಿಸ್ತಾರ’ ಪಾಸ್‌ಗಳನ್ನು ಜಾರಿಗೊಳಿಸಲಾಗಿದೆ.

ಜೂನ್ 2ರಿಂದ 21ರವರೆಗೆ 60,400 ಸಾಮಾನ್ಯ ಮಾಸಿಕ ಪಾಸ್‌ಗಳು ಮಾರಾಟವಾಗಿದ್ದರೆ, ‘ಸಾಮಾನ್ಯ ವಿಸ್ತಾರ’ ಮಾಸಿಕ ಪಾಸ್‌ಗಳನ್ನು ಕೇವಲ 160 ಮಂದಿ ಖರೀದಿಸಿದ್ದಾರೆ.

ಹೀಗಾಗಿ, ಸಾಮಾನ್ಯ ಮಾಸಿಕ ಪಾಸ್ ದರ ಏರಿಕೆಯಾಗಿದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಹೊಸ ಪಾಸ್ ವ್ಯವಸ್ಥೆ ವಿಸ್ತರಿತ ಮಾರ್ಗಗಳ ಪ್ರಯಾಣಿಕರಿಗಾಗಿ ಮಾತ್ರ ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Author

ANU News

Follow Me
Other Articles
Previous

ಇರಾನ್ ಮೇಲಿನ ಕೆಲವು ನಿರ್ಬಂಧ ಸಡಿಲಿಕೆ; ತೈಲ ರಫ್ತಿಗೆ ಅಮೆರಿಕ ಅವಕಾಶ

Next

ಲಕ್ನೋ ಅಗ್ನಿ ದುರಂತ: ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme