Skip to content
ANU News
ANU News
  • Home
  • Home
ANU News
ANU News
  • Home
  • Home
Others

ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ

By ANU News
May 24, 2026 2 Min Read
0

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ.

ನಿತಿನ್ ನವೀನ್ ಅವರೊಂದಿಗೆ ನಡೆದ ಸಭೆಯ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ರಾಜ್ಯದಲ್ಲಿ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ನ ವೈಫಲ್ಯಗಳನ್ನು ಜನರಿಗೆ ಎತ್ತಿತೋರಿಸಿ ಬಿಜೆಪಿ ವಿಶ್ವಾಸಾರ್ಹ ಪಕ್ಷ ಎಂಬುದನ್ನು ಮನವರಿಕೆ ಮಾಡಿಕೊಡಲು ಎಲ್ಲರೂ ಸಂಘಟನಾತ್ಮಕವಾಗಿ ಶ್ರಮಿಸಬೇಕು. ಪಕ್ಷಕ್ಕಾಗಿ ಕಟಿಬದ್ಧರಾಗಿ ದುಡಿಯಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಸಲಹೆ ನೀಡಿದರು ಎಂದು ವಿವರ ನೀಡಿದರು.

ನಿತಿನ್ ನವೀನ್ ಅವರು ಅಧ್ಯಕ್ಷರಾದ ನಂತರ ಕರ್ನಾಟಕಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಪಕ್ಷದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರ ಮಟ್ಟದ ಮೇಲಿನವರೊಂದಿಗೆ ಸಂವಾದ ನಡೆಸಿದರು. ಪಕ್ಷದ ಪರಿಶ್ರಮದಿಂದಾಗಿ ಇಂದು 22ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 400 ಕ್ಕೂ ಹೆಚ್ಚು ಸಂಸದರಿದ್ದಾರೆ, 2000 ಕ್ಕೂ ಹೆಚ್ಚು ಶಾಸಕರಿದ್ದಾರೆ. ಇದು ಪಕ್ಷದ ಮೇಲೆ ಜನರು ಇಟ್ಟು ವಿಶ್ವಾಸದಿಂದ ಸಾಧ್ಯವಾಗಿದೆ. ಇದೇ ನಂಬಿಕೆಯನ್ನು ಮುಂದಿನ ಚುನಾವಣೆಗಳಲ್ಲಿ ಉಳಿಸಿಕೊಳ್ಳಬೇಕು. ಪ್ರತಿಯೊಬ್ಬ ಮುಖಂಡರು, ಶಾಸಕರು ಕಾರ್ಯಕರ್ತರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಳ್ಳಬೇಕು. ಜನರೊಟ್ಟಿಗೆ ಸಂವಾದ ನಡೆಸಬೇಕು, ಜನಪರ ಕಾರ್ಯಗಳ ಮೂಲಕವೇ ಗೆಲ್ಲಬೇಕು, ಜನಪರ ಹೋರಾಟಗಳ ಮೂಲಕ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕೊಡಬೇಕು ಎಂಬ ಮಾತನ್ನು ಹೇಳಿದರು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಯಾವ ವಿಶ್ವಾಸವನ್ನು ಮೂಡಿಸಿ ಹೇಗೆ ಅಧಿಕಾರಕ್ಕೆ ಬಂದಿತ್ತೋ ಆ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಭ್ರಭ್ರಷ್ಟಾಚಾರದ ವಿರುದ್ಧ ಮಾತನಾಡಿದವರು ಈಗ ಎಲ್ಲ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೆಚ್ಚಿನ ಸಚಿವರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ, ಮುಖ್ಯಮಂತ್ರಿಗಳೂ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿಲ್ಲ. ಜನರ ಬದುಕನ್ನು ಹಸನು ಮಾಡುವ ಭರವಸೆ ಕೊಟ್ಟ ಕಾಂಗ್ರೆಸ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂದೆ ಕಾಂಗ್ರೆಸ್ ನೀತಿ ಇದೆ. ಕೇವಲ ಗ್ಯಾರಂಟಿ ಪ್ರಚಾರದಲ್ಲಿ ಸರ್ಕಾರ ತೊಡಗಿದೆ. ಆದರೆ ಜನರ ಬದುಕಿಗೆ ಗ್ಯಾರಂಟಿ ಇಲ್ಲದಾಗಿದೆ. ಕಾನೂನು ಸುವ್ಯವಸ್ಥೆ ಹದಗಟ್ಟಿದೆ. ಯುವಕರು ಹತಾಶರಾಗಿದ್ದಾರೆ. ಅತಿ ಹೆಚ್ಚು ಮಹಿಳೆಯರ ನಾಪತ್ತೆ ಪ್ರಕರಣ ಆಗಿದೆ. ಹೀಗೆ ಎಲ್ಲದರಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಇದೊಂದೇ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡದು. ಮುಂದೆ ನಾವೇ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಇರಬೇಡಿ ಎಂದು ಎಚ್ಚರಿಕೆ ನೀಡಿದರು ಎಂದು ನುಡಿದರು.

ತಮಿಳುನಾಡಿನಲ್ಲಿ ಡಿಎಂಕೆ ವೈಫಲ್ಯ ಎದ್ದು ಕಾಣುತ್ತಿತ್ತು. ಇದೊಂದೇ ಎಐಡಿಎಡಿಎಂಕೆ ಅಧಿಕಾರಕ್ಕೆ ಬರಲು ಸಹಾಯ ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಟಿವಿಕೆ ಪಕ್ಷ ಮಧ್ಯೆ ಬಂದು ಅಧಿಕಾರ ಪಡೆಯಿತು. ಕರ್ನಾಟಕದಲ್ಲೂ ಬಿಜೆಪಿ ನಾಯಕರು ಮುಂದೆ ನಮ್ಮದೇ ಅಧಿಕಾರ ಎಂದು ಸುಮ್ಮನೆ ಕೂರಬೇಡಿ. ದೇಶದಲ್ಲಿ ಕಾಂಗ್ರೆಸ್‍ಗೆ ಮೋದಿ ಅವರು ಒಳ್ಳೆಯ ಪರ್ಯಾಯ ಹೇಗೆ ಕೊಟ್ಟರೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಉತ್ತಮ ಪರ್ಯಾಯ ಎಂದು ಜನ ಭಾವಿಸುವ ರೀತಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು ಎಂದರು.

ಕಾಂಗ್ರೆಸ್ ವೈಫಲ್ಯ ಇಟ್ಟುಕೊಂಡು ನಿರಂತರವಾಗಿ ಹೋರಾಟದ ಮೂಲಕ ತಂಡವಾಗಿ ಕೆಲಸ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮೂರು ವರ್ಷಗಳ ಆಡಳಿತ ವೈಫಲ್ಯ ಕುರಿತು ಆರೋಪಪಟ್ಟಿ ತಯಾರಿಸಿ ಜನರ ಮುಂದಿಡಲು ಯೋಜನೆ ರೂಪಿಸಿ. ಕರ್ನಾಟಕವು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ದೇಶದಲ್ಲೇ ಬಲವಾದ ಸಂಘಟನೆ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಜನಪರ ಹೋರಾಟ ಮಾಡಿದರೆ ಜನರೇ ಅಧಿಕಾರಕ್ಕೆ ಬರುವ ಶಕ್ತಿಯನ್ನು ಕೊಡುತ್ತಾರೆ ಎಂಬುದನ್ನು ಅರಿಯಿರಿ ಎಂದು ಹೇಳಿದರು.

ವ್ಯಕ್ತಿ ಹಿತಕ್ಕಾಗಿ ಕೆಲಸ ಮಾಡದೇ ಜನರ ಮತ್ತು ಪಕ್ಷದ ಹಿತ ರಕ್ಷಿಸುವ ಕೆಲಸ ಮಾಡಿ. ರಾಜ್ಯದಲ್ಲಿನ ಆರಾಜಕ ಶಕ್ತಿ ಬಗ್ಗೆಯೂ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು ಎಂದು ಹೇಳಿದರು. ಕರ್ನಾಟಕದ ಅಸ್ಮಿತೆ ಜೊತೆಗೆ ರಾಷ್ಟ್ರದ ಗೌರವ ಉಳಿಸಿ ನಾವು ಕೆಲಸ ಮಾಡಬೇಕಾಗಿದೆ. ದೇಶದ ಸಮಗ್ರತೆಗೆ ಅಡ್ಡಿಯಾಗದಂತೆ ಎಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಅಸ್ಮಿತೆ ಉಳಿಸಿಕೊಂಡು ರಾಷ್ಟ್ರದ ಸಮಗ್ರತೆ ಕಾಪಾಡಿ ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು.

ಮುಂದಿನ ಮೂರು ದಿನಗಳ ಪ್ರವಾಸದ ವೇಳೆ ವಿವರವಾಗಿ ಚರ್ಚೆ ಮಾಡಲಾಗುವುದು. ವಿಧಾನ ಪರಿಷತ್, ವಿಧಾನಸಭೆ ಉಪ ಚುನಾವಣೆ, ಜಿಬಿಎ ಚುನಾವಣೆ ಕಡೆಗೆ ಗಮನಕೊಡಿ. ಗೆಲ್ಲಲು ಕಾರ್ಯಯೋಜನೆ ತಯಾರಿಸಿ. ಕೋರ್ ಕಮಿಟಿ ಈ ಬಗ್ಗೆ ಅವಲೋಕನ ಮಾಡಲಿ ಎಂದರು. ಎಸ್‍ಐಆರ್ ಸಂಬಂಧ ಕಾಂಗ್ರೆಸ್ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದೆ. ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಎಸ್‍ಐಆರ್ ಮಾಡಿದರೆ ಸರಿ. ಆದರೆ ಬಿಜೆಪಿ ಮಾಡಿದರೆ ತಪ್ಪು ಎನ್ನುವಂತಾಗಿದೆ. ಕಾಂಗ್ರೆಸ್‍ಗೆ ಎಲ್ಲವನ್ನೂ ವಿರೋಧಿಸುವ ಸಿಂಡ್ರೋಮ್ ಇದೆ ಎಂದು ವ್ಯಂಗ್ಯವಾಡಿದರು.

Author

ANU News

Follow Me
Other Articles
Previous

ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ

Next

Rajasthan Royals beat Mumbai Indians by 30 runs, seal IPL playoff berth

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • 23 Parties Write to CJI Over Election Commission’s SIR Process
    • Six Fishermen Rescued by Coast Guard off Mangaluru Coast
    • ಮಂಗಳೂರು ಕರಾವಳಿಯಲ್ಲಿ ಆರು ಮೀನುಗಾರರ ರಕ್ಷಣೆ
    • ಚುನಾವಣಾ ಆಯೋಗದ SIR ಪ್ರಕ್ರಿಯೆ ಕುರಿತು ಸಿಜೆಐಗೆ 23 ಪಕ್ಷಗಳ ಜಂಟಿ ಪತ್ರ
    • Government Withdraws Temporary Curbs on Petrol and Diesel Sales
    Copyright 2026 — ANU News. All rights reserved. Blogsy WordPress Theme