Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕಸಿನಿಮಾ

‘ಮಂಗಳಗೌರಿ’ಯಲ್ಲಿ ಮಾಲಾಶ್ರೀ–ರುಕ್ಮಿಣಿ ವಸಂತ್

By ANU News
September 15, 2026 1 Min Read
0

ಬೆಂಗಳೂರು: ಕನ್ನಡ ಚಿತ್ರರಂಗದ ‘ಕನಸಿನ ರಾಣಿ’ ಮಾಲಾಶ್ರೀ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ರುಕ್ಮಿಣಿ ವಸಂತ್ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ ‘ಮಂಗಳಗೌರಿ’ ಎಂಬ ಶೀರ್ಷಿಕೆ ಇಡಲಾಗಿದೆ.

ಗೌರಿ–ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಬಿಡುಗಡೆ ಮಾಡಿದೆ. ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಹೇಮಂತ್ ಎಂ. ರಾವ್ ಅವರ ದಾಕ್ಷಾಯಣಿ ಟಾಕೀಸ್ ಜಂಟಿಯಾಗಿ ನಿರ್ಮಿಸುತ್ತಿವೆ. ರಾಹುಲ್ ಪಿ.ಕೆ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ.

ಮಾಲಾಶ್ರೀ ಅವರ ಅನುಭವ ಹಾಗೂ ರುಕ್ಮಿಣಿ ವಸಂತ್ ಅವರ ಹೊಸ ತಲೆಮಾರಿನ ಜನಪ್ರಿಯತೆಯ ಸಂಗಮವಾಗಿರುವ ‘ಮಂಗಳಗೌರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆಯೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

Author

ANU News

Follow Me
Other Articles
Previous

Wild elephant tramples 65-year-old farmer to death in Chamarajanagar

Next

Malashree, Rukmini Vasanth share screen for first time in ‘Mangalagowri’

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಜಲಜೀವನ್ ಮಿಷನ್ ಗೋಲ್ ಮಾಲ್: ಕಳಪೆ ಕಾಮಗಾರಿ, ನೀರು ಪೂರೈಕೆ ಲೋಪಗಳ ಬಗ್ಗೆ ಸಿಬಿಐ ತನಿಖೆಗೆ ಡಾ.ರವಿ ಸಿ.ಟಿ. ಅಗ್ರಹ
    • Probe sought into alleged lapses, poor quality in Jal Jeevan Mission works
    • Kannada school reopens in Qatar with renewed focus on language, culture
    • ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕತಾರ್‌ನಲ್ಲಿ ಕನ್ನಡ ಪಾಠಶಾಲೆ ಪುನರಾರಂಭ
    • Mekedatu project is only permanent solution to Cauvery dispute, says K’taka minister
    Copyright 2026 — ANU News. All rights reserved. Blogsy WordPress Theme