ಲೀಚ್ಟೆನ್ಸ್ಟೈನ್ ರಾಜಕುಮಾರ ಅಲೋಯಿಸ್ ಭೇಟಿ ಮಾಡಿದ ಪ್ರಧಾನಿ ಮೋದಿ; ಭಾರತ–ಇಎಫ್ಟಿಎ ವ್ಯಾಪಾರ ಒಪ್ಪಂದ ಪರಿಶೀಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 27ರಂದು ಲೀಚ್ಟೆನ್ಸ್ಟೈನ್ನ ಆನುವಂಶಿಕ ರಾಜಕುಮಾರ ಅಲೋಯಿಸ್ ಅವರನ್ನು ಭೇಟಿಯಾಗಿ, ಭಾರತ ಮತ್ತು ಲೀಚ್ಟೆನ್ಸ್ಟೈನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದರು.
ಸಭೆಯಲ್ಲಿ ಭಾರತ–ಯುರೋಪಿಯನ್ ಮುಕ್ತ ವ್ಯಾಪಾರ ಸಂಘದ (ಇಎಫ್ಟಿಎ) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ (ಟಿಇಪಿಎ) ಅನುಷ್ಠಾನದಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಒಪ್ಪಂದ ಜಾರಿಯಾಗಿ ಮೊದಲ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಹೂಡಿಕೆ ಹರಿವನ್ನು ಹೆಚ್ಚಿಸುವುದು ಹಾಗೂ ಆರ್ಥಿಕ ಸಹಕಾರವನ್ನು ವಿಸ್ತರಿಸುವ ಅವಕಾಶಗಳ ಕುರಿತು ಚರ್ಚೆ ನಡೆಸಿದರು.

ಸಭೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಾತುಕತೆಗಳು ಹಲವು ವಿಷಯಗಳನ್ನು ಒಳಗೊಂಡಿದ್ದವು ಎಂದು ತಿಳಿಸಿದ್ದಾರೆ. ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸುವುದರ ಜತೆಗೆ, ಹೆಚ್ಚಿನ ಹೂಡಿಕೆ ಮತ್ತು ಸಹಕಾರಕ್ಕೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಸಭೆ ಅವಕಾಶ ಕಲ್ಪಿಸಿತು ಎಂದು ಹೇಳಿದ್ದಾರೆ.