Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಸುಡಾನ್‌ನಲ್ಲಿ ಚಿನ್ನದ ಗಣಿ ಕುಸಿತ: 11 ಕಾರ್ಮಿಕರು ಸಾವು

By ANU News
September 21, 2026 1 Min Read
0

ಖಾರ್ಟೌಮ್: ಈಶಾನ್ಯ ಸುಡಾನ್‌ನ ಕೆಂಪು ಸಮುದ್ರ ರಾಜ್ಯದ ಒನಿ ಪ್ರದೇಶದಲ್ಲಿ ಚಿನ್ನದ ಗಣಿಯ ಸುರಂಗ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ 11 ಕಾರ್ಮಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ ಗಣಿ ಕುಸಿಯಲು ಆರಂಭಿಸಿದ್ದು, ಭಾನುವಾರದ ವೇಳೆಗೆ ಅವಶೇಷಗಳಿಂದ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ. 30 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸುಡಾನ್ ಮಿನರಲ್ ರಿಸೋರ್ಸಸ್ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಸುಡಾನ್‌ನಲ್ಲಿ ಅನಧಿಕೃತ ಚಿನ್ನದ ಗಣಿ ಕುಸಿದಿರುವ ಎರಡನೇ ಘಟನೆ ಇದಾಗಿದೆ. ಗಣಿಗಾರಿಕೆ ಪ್ರದೇಶಗಳಲ್ಲಿ ಸುರಕ್ಷತಾ ಮಾನದಂಡಗಳ ಕೊರತೆಯಿಂದ ಇಂತಹ ದುರಂತಗಳು ಪದೇಪದೆ ಸಂಭವಿಸುತ್ತಿವೆ ಎಂದು ವರದಿಯಾಗಿದೆ.

ಕಳೆದ ವಾರ ಪಶ್ಚಿಮ ಸುಡಾನ್‌ನಲ್ಲಿ ನಡೆದ ಮತ್ತೊಂದು ಚಿನ್ನದ ಗಣಿ ಕುಸಿತದಲ್ಲಿ ಕನಿಷ್ಠ 82 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಕೂಡಾ ಭಾರೀ ಸಾವು-ನೋವಿಗೆ ಸಾಕ್ಷಿಯಾಗಿದೆ.

Author

ANU News

Follow Me
Other Articles
Previous

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಷರತ್ತು: ವಾಣಿಜ್ಯ ಹಡಗುಗಳ ಮಾರ್ಗ ಬದಲಿಸಿದ ಅಮೆರಿಕ

Next

Sudan gold mine collapse kills 11, over 30 injured

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Declare Gadag drought-hit or I’ll quit’: HK Patil puts pressure on govt
    • ಅಕ್ಟೋಬರ್ 10ರೊಳಗೆ ಗದಗ ಬರಪೀಡಿತ ಘೋಷಿಸಿ; ಇಲ್ಲದಿದ್ದರೆ ರಾಜೀನಾಮೆ: ಎಚ್.ಕೆ. ಪಾಟೀಲ
    • Sourav Gurjar booked, arrested in Hyderabad following woman’s cheating complaint
    • ‘ಮಹಾಭಾರತ’ದ ಭೀಮ ಬಂಧನ! ನಟ ಸೌರವ್ ಗುರ್ಜರ್ ವಿರುದ್ಧ ವಂಚನೆ ಆರೋಪ
    • Karnataka legislature gears up for three-day session amid row over Kasturirangan report
    Copyright 2026 — ANU News. All rights reserved. Blogsy WordPress Theme