ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲ ಪತ್ತೆ; ಇಂಧನ ಕ್ಷೇತ್ರಕ್ಕೆ ಹೊಸ ಉತ್ತೇಜನ
ಪೋರ್ಟ್‌ಬ್ಲೇರ್: ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿರುವ ನಡುವೆಯೇ, ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಅಂಡಮಾನ್ ಸಮುದ್ರದಲ್ಲಿ ಹೊಸ ನೈಸರ್ಗಿಕ ಅನಿಲ ನಿಕ್ಷೇಪವನ್ನು ಪತ್ತೆಹಚ್ಚಿದೆ.
ಕಂಪನಿಯು ಮುಕ್ತ ಪರವಾನಗಿ ನೀತಿ (OALP) ಅಡಿಯಲ್ಲಿ ಕೊರೆಯಲಾದ ವಿಜಯಪುರಂ-3 ಅನ್ವೇಷಣಾ ಬಾವಿಯಲ್ಲಿ ಅನಿಲ ಪತ್ತೆಯಾಗಿದೆ ಎಂದು ತಿಳಿಸಿದೆ. ಈ ಬಾವಿ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿ.ಮೀ ದೂರದಲ್ಲಿ, 355 ಮೀಟರ್ ಸಮುದ್ರದ ಆಳದಲ್ಲಿ ಸ್ಥಾಪಿಸಲಾಗಿದೆ.

ಈ ಪತ್ತೆಯೊಂದಿಗೆ, AN-OSHP-2018/1 ಬ್ಲಾಕ್‌ನಲ್ಲಿ ಇದುವರೆಗೆ ಕೊರೆಯಲಾದ ಮೂರು ಅನ್ವೇಷಣಾ ಬಾವಿಗಳಲ್ಲಿ ಎರಡರಲ್ಲಿ ಹೈಡ್ರೋಕಾರ್ಬನ್ ಅಸ್ತಿತ್ವ ದೃಢಪಟ್ಟಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣ X ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ಅಂಡಮಾನ್ ಸಮುದ್ರದ ಅಪಾರ ಇಂಧನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
Congratulations @OilIndiaLimited !
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx— Hardeep Singh Puri (@HardeepSPuri) June 5, 2026