Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಅಡಿಕೆ ಬೆಲೆ ಭಾರೀ ಏರಿಕೆ; ಶಿವಮೊಗ್ಗದಲ್ಲಿ 94 ಸಾವಿರ ಗಡಿ ದಾಟಿದ ಸರಕು ಅಡಿಕೆ

By ANU News
May 21, 2026 1 Min Read
0

ಶಿವಮೊಗ್ಗ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಬುಧವಾರ ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ಬೆಲೆ 94 ಸಾವಿರ ರೂ. ಗಡಿ ದಾಟಿರುವುದು ವ್ಯಾಪಾರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ದರ 94,000 ರೂ. ದಾಖಲಾಗಿದ್ದು, ಮಾದರಿ ಬೆಲೆ 83,000 ರೂ. ಆಗಿದೆ. ಬೆಟ್ಟೆ ಅಡಿಕೆ 65,300 ರೂ., ರಾಶಿ ಅಡಿಕೆ 54,309 ರೂ. ಹಾಗೂ ಗೊರಬಲು 43,111 ರೂ. ದರ ಕಂಡಿದೆ. ಇವುಗಳ ಮಾದರಿ ಬೆಲೆಗಳು ಕ್ರಮವಾಗಿ 63,600 ರೂ., 52,500 ರೂ. ಮತ್ತು 39,300 ರೂ. ಆಗಿವೆ.

ಇನ್ನೊಂದೆಡೆ, ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲೂ ಉತ್ತಮ ವಹಿವಾಟು ಕಂಡುಬಂದಿದೆ. ಇಲ್ಲಿ ರಾಶಿ ಅಡಿಕೆಯ ಗರಿಷ್ಠ ದರ 53,099 ರೂ. ಆಗಿದ್ದು, ಮಾದರಿ ಬೆಲೆ 48,599 ರೂ. ದಾಖಲಾಗಿದೆ.

ಮುಂಗಾರು ಮಳೆಯ ಆಗಮನ ಸಮೀಪಿಸುತ್ತಿರುವ ಹಿನ್ನೆಲೆ ಕೃಷಿ ಚಟುವಟಿಕೆಗಳು ಜೋರಾಗುತ್ತಿದ್ದು, ಅಡಿಕೆ ವ್ಯಾಪಾರವೂ ಚುರುಕುಗೊಂಡಿದೆ. ವ್ಯಾಪಾರಿಗಳು ಹಳೆಯ ರಾಶಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳಲು ಆಸಕ್ತಿ ತೋರುತ್ತಿರುವುದೇ ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಸರಕು ಅಡಿಕೆ 94 ಸಾವಿರ ರೂ. ಗಡಿ ತಲುಪಿರುವುದು ಹಾಗೂ ಚನ್ನಗಿರಿಯಲ್ಲಿ ರಾಶಿ ಅಡಿಕೆ 54 ಸಾವಿರ ರೂ. ಸಮೀಪಿಸಿರುವುದು ಅಡಿಕೆ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Author

ANU News

Follow Me
Other Articles
Previous

ಐದು ರಾಷ್ಟ್ರಗಳ ಮೋದಿ ಪ್ರವಾಸದಿಂದ ಭಾರತಕ್ಕೆ ಹೆಚ್ಚಿದ ರಾಜತಾಂತ್ರಿಕ ಬಲ

Next

ಭಾರತ್ ಇನ್ನೋವೇಟ್ಸ್ 2026ಕ್ಕೂ ಮುನ್ನ ಬೆಂಗಳೂರಿನಲ್ಲಿ ಹೂಡಿಕೆದಾರರ ಪ್ರದರ್ಶನ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ KSRTC ಬಸ್ ಸಂಚಾರ; ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ ಎಂದ ಜೆಡಿಎಸ್
    • BJP Alleges Irregularities in Voter List Revision, Targets Congress Over SIR Process
    • ಅಕ್ರಮ ವಲಸಿಗರು, ನುಸುಳುಕೋರರಿಗೆ ಮಣೆಹಾಕುತ್ತಿರುವ ಕಾಂಗ್ರೆಸ್‌ ಗೆ ಜನರಿಂದ ತಕ್ಕ ಪಾಠ; ಬಿಜೆಪಿ
    • Eight Killed in Separate Accidents in Andhra Pradesh and Telangana
    • ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ
    Copyright 2026 — ANU News. All rights reserved. Blogsy WordPress Theme