Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
Others

ಕಿಡ್ನಿ ಆರೋಗ್ಯಕ್ಕೆ ಎಳನೀರು ಸಹಾಯಕವೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

By ANU News
May 13, 2026 1 Min Read
0

ಬೇಸಿಗೆಯಲ್ಲಿ ದೇಹಕ್ಕೆ ತಂಪು ಮತ್ತು ತಾಜಾತನ ನೀಡುವ ಪಾನೀಯಗಳಲ್ಲಿ ಎಳನೀರು ಪ್ರಮುಖವಾಗಿದೆ. ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು ದೇಹದ ನೀರಿನ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಕಿಡ್ನಿ ಆರೋಗ್ಯಕ್ಕೂ ಇದು ಕೆಲವು ರೀತಿಯಲ್ಲಿ ಉಪಕಾರಿಯಾಗಬಹುದು. ಆದರೆ, ಎಳನೀರಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವುದರಿಂದಈಗಾಗಲೇ ಕಿಡ್ನಿ ಸಮಸ್ಯೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು, ರಕ್ತದಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವವರು, ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಔಷಧಿ ಸೇವಿಸುವವರು ವೈದ್ಯರ ಸಲಹೆಯಿಲ್ಲದೆ ಎಳನೀರು ಸೇವಿಸಬಾರದು ಎನ್ನುತ್ತಾರೆ ತಜ್ಞರು.

ಕಿಡ್ನಿಗೆ ಎಳನೀರು ಹೇಗೆ ಸಹಾಯಕ?

ಎಳನೀರಿನಲ್ಲಿ ಪೊಟ್ಯಾಸಿಯಂ, ಮ್ಯಾಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ದೇಹದ ದ್ರವ ಸಮತೋಲನ ಕಾಪಾಡಲು ನೆರವಾಗುತ್ತದೆ. ಇದರಿಂದ:

  • ದೇಹದ ನೀರಿನ ಕೊರತೆ ಕಡಿಮೆ ಆಗಬಹುದು
  • ಮೂತ್ರವಿಸರ್ಜನೆ ಸುಗಮವಾಗಲು ಸಹಾಯವಾಗಬಹುದು
  • ದೇಹದಲ್ಲಿನ ವಿಷಕಾರಿ ಅಂಶ ಹೊರಹಾಕಲು ನೆರವಾಗಬಹುದು
    ಕೆಲವು ಸಂದರ್ಭಗಳಲ್ಲಿ ಕಿಡ್ನಿ ಕಲ್ಲುಗಳ ಅಪಾಯ ಕಡಿಮೆ ಮಾಡಲು ಸಹಕಾರಿ ಆಗಬಹುದು

ಕೆಲ ಅಧ್ಯಯನಗಳ ಪ್ರಕಾರ, ಎಳನೀರು ಮೂತ್ರದಲ್ಲಿನ ಖನಿಜಗಳ ಸಮತೋಲನ ಸುಧಾರಿಸಲು ನೆರವಾಗಿ ಕಿಡ್ನಿ ಸ್ಟೋನ್‌ಗಳ ರೂಪುಗೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ.

ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

ಸಾಮಾನ್ಯ ಆರೋಗ್ಯ ಹೊಂದಿರುವವರು: ದಿನಕ್ಕೆ 1 ಎಳನೀರು ಅಥವಾ ಸುಮಾರು 200–300 ಮಿಲಿ ಪ್ರಮಾಣದಲ್ಲಿ ಸೇವಿಸಬಹುದು, ವಾರಕ್ಕೆ 3–4 ಬಾರಿ ಸೇವಿಸುವುದು ಬಹುತೇಕ ಜನರಿಗೆ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ, ಬೇಸಿಗೆಯಲ್ಲಿ ದೇಹ ಹೆಚ್ಚು ದಣಿದಿದ್ದರೆ ಅಥವಾ ನೀರಿನ ಕೊರತೆ ಕಂಡುಬಂದರೆ ವೈದ್ಯರ ಸಲಹೆಯಂತೆ ಪ್ರಮಾಣ ಹೆಚ್ಚಿಸಬಹುದು.

ಯಾವ ಸಮಯದಲ್ಲಿ ಕುಡಿಯುವುದು ಉತ್ತಮ?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ ಕುಡಿಯಬಹುದು. ವ್ಯಾಯಾಮದ ನಂತರ ಸೇವಿಸಿದರೆ ದೇಹಕ್ಕೆ ಶಕ್ತಿ ಮತ್ತು ಹೈಡ್ರೇಷನ್ ನೀಡಲು ಸಹಾಯಕವಾಗಬಹುದು. ರಾತ್ರಿ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದನ್ನು ಕೆಲವರು ತಪ್ಪಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.

ಗಮನದಲ್ಲಿರಲಿ, ಎಳನೀರು ಆರೋಗ್ಯಕರ ಪಾನೀಯವಾದರೂ, ಅದನ್ನು “ಔಷಧಿ” ಎಂದು ಪರಿಗಣಿಸಬಾರದು. ಸಮತೋಲನದ ಆಹಾರ, ಸಾಕಷ್ಟು ನೀರು, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆಗಳೊಂದಿಗೆ ಮಾತ್ರ ಕಿಡ್ನಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು.

Author

ANU News

Follow Me
Other Articles
Previous

KSRTC ನೌಕರರಿಗೆ ಗುಡ್ ನ್ಯೂಸ್; ನಾಲ್ಕೂ ನಿಗಮಗಳ ಸಿಬ್ಬಂದಿ ವೇತನ 12.5% ಪರಿಷ್ಕರಣೆ: ಸರ್ಕಾರ ಆದೇಶ

Next

ಮುಂದಿನ ತಿಂಗಳು ಭಾರತಕ್ಕೆ ಅಮೆರಿಕ ವ್ಯಾಪಾರ ತಂಡ ಭೇಟಿ ಸಾಧ್ಯತೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme