ನವೆಂಬರ್ 4ರಿಂದ ಭಾರತ–ನ್ಯೂಜಿಲೆಂಡ್ ಏಕದಿನ ಸರಣಿ ಆರಂಭ
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ನವೆಂಬರ್ 4ರಿಂದ ಆರಂಭವಾಗಲಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ನವೆಂಬರ್ 15ರಂದು ಟೌರಂಗಾದ ಬೇ ಓವಲ್‌ನಲ್ಲಿ ಅಂತಿಮ ಪಂದ್ಯ ಜರುಗಲಿದೆ.
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 7.30ಕ್ಕೆ ಆರಂಭವಾಗಲಿವೆ. ಸರಣಿಯ ಪಂದ್ಯಗಳು ಆಕ್ಲೆಂಡ್, ವೆಲ್ಲಿಂಗ್ಟನ್, ಹ್ಯಾಮಿಲ್ಟನ್ ಮತ್ತು ಟೌರಂಗಾದಲ್ಲಿ ನಡೆಯಲಿವೆ.

ಏಕದಿನ ಸರಣಿಯ ವೇಳಾಪಟ್ಟಿ
- ನವೆಂಬರ್ 4: ಮೊದಲ ಪಂದ್ಯ – ಈಡನ್ ಪಾರ್ಕ್, ಆಕ್ಲೆಂಡ್
- ನವೆಂಬರ್ 7: ಎರಡನೇ ಪಂದ್ಯ – ಎಚ್‌ಎನ್‌ಆರ್‌ವೈ ಸ್ಟೇಡಿಯಂ, ವೆಲ್ಲಿಂಗ್ಟನ್
- ನವೆಂಬರ್ 10: ಮೂರನೇ ಪಂದ್ಯ – ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
- ನವೆಂಬರ್ 13: ನಾಲ್ಕನೇ ಪಂದ್ಯ – ಬೇ ಓವಲ್, ಟೌರಂಗಾ
- ನವೆಂಬರ್ 15: ಐದನೇ ಪಂದ್ಯ – ಬೇ ಓವಲ್, ಟೌರಂಗಾ
ಏಕದಿನ ಸರಣಿ ಮುಕ್ತಾಯದ ಬಳಿಕ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಟೆಸ್ಟ್ ನವೆಂಬರ್ 19ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 1ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.