Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು 2028ರಲ್ಲಿ ಸುಧಾಕರ್ ಅವರನ್ನು ಗೆಲ್ಲಿಸಿ: ಬಸವರಾಜ ಬೊಮ್ಮಾಯಿ

By ANU News
November 2, 2026 1 Min Read
Comments Off on ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು 2028ರಲ್ಲಿ ಸುಧಾಕರ್ ಅವರನ್ನು ಗೆಲ್ಲಿಸಿ: ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಶೀಘ್ರ ಪೂರ್ಣಗೊಂಡು ಬರದ ನಾಡು ಸಮೃದ್ಧವಾಗಬೇಕಾದರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಡಾ. ಕೆ. ಸುಧಾಕರ್ ಅವರನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಸದ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತರೂ 12 ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ತಲಾ ₹5,000 ನೆರವು ನೀಡಿ ಶಿಕ್ಷಣಕ್ಕೆ ಬೆಂಬಲವಾಗಿ ನಿಂತ ನಾಯಕ ಸುಧಾಕರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಲು-ಗೆಲುವು ರಾಜಕೀಯದ ಭಾಗ. ಆದರೆ ಕಷ್ಟದ ಸಂದರ್ಭದಲ್ಲಿಯೂ ಜನರ ಸೇವೆಯನ್ನು ಮುಂದುವರಿಸುವ ನಾಯಕರನ್ನು ಜನರು ಮರೆಯಬಾರದು. ಸುಧಾಕರ್ ಅವರು ಸೋತರೂ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದು ಸೇವೆ ಮುಂದುವರಿಸಿದ್ದಾರೆ ಎಂದರು.

ತಮ್ಮ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ₹9,000 ಕೋಟಿ ಅನುದಾನ ಒದಗಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಯೋಜನೆ ಶೀಘ್ರ ಪೂರ್ಣಗೊಂಡು ಬರಪೀಡಿತ ಪ್ರದೇಶಗಳಿಗೆ ನೀರು ಹರಿದು ರೈತರ ಹೊಲಗಳು ಹಸಿರಾಗಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.

2028ರಲ್ಲಿ ಸುಧಾಕರ್ ಅವರನ್ನು ಮತ್ತೆ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಬೊಮ್ಮಾಯಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಟ್ಯಾಮರ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ: 14 ಪದಕಗಳೊಂದಿಗೆ ಭಾರತಕ್ಕೆ ಅಗ್ರಸ್ಥಾನ

Next

ನವೆಂಬರ್ 4ರಿಂದ ಭಾರತ–ನ್ಯೂಜಿಲೆಂಡ್ ಏಕದಿನ ಸರಣಿ ಆರಂಭ

Recent Posts

  • ಪ್ರಧಾನಿ ಮೋದಿಗೆ ಸಮರ್ಪಿಸಿದ 76ನೇ ಸ್ತೂಪ; ಭಾರತ-ಭೂತಾನ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಮತ್ತಷ್ಟು ಬಲ
  • Kiren Rijiju Attends Consecration of 108 Stupas in Bhutan
  • ಹೈಲೋ ಓಪನ್ ಸೂಪರ್ 500: ಸಿಂಧು, ಲಕ್ಷ್ಯ ಸೇನ್‌ಗೆ ಸಿಂಗಲ್ಸ್ ಪ್ರಶಸ್ತಿ
  • PV Sindhu, Lakshya Sen Win Singles Titles at Hylo Open Super 500
  • India-New Zealand Five-Match ODI Series to Begin on November 4
Copyright 2026 — ANU News. All rights reserved. Blogsy WordPress Theme