Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ; ಸರಣಿ ಅವಘಡಗಳಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ

By ANU News
April 30, 2026 1 Min Read
0

ಬೆಂಗಳೂರು: ಬುಧವಾರ ಸುರಿದ ಭಾರೀ ಮಳೆಯ ಪರಿಣಾಮವಾಗಿ ನಗರದಲ್ಲಿ ಸಂಭವಿಸಿದ ಸರಣಿ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಮೇಲ್ಚಾವಣಿ ಹಾಗೂ ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಮಂಜುನಾಥ್ ಮೃತಪಟ್ಟಿದ್ದಾರೆ. ಗಾಳಿ-ಮಳೆಯಿಂದ ಮನೆಯ ಶೀಟ್ ಕೆಳಗೆ ಬಿದ್ದಿದ್ದು, ಅದರ ಮೇಲಿಟ್ಟಿದ್ದ ಕಲ್ಲು ಮಲಗಿದ್ದ ಮಂಜುನಾಥ್ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಗೆ ಸ್ಥಳಾಂತರಿಸಲಾಗಿದೆ.

ಇದರೊಂದಿಗೆ, ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಪ್ರಕರಣದಲ್ಲಿ ಮಗು ಸೇರಿ 7 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರನ್ನು ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್ (39), ಮುಸಾವಿರ್ ಬೇಗಂ (6), ಸ್ಮಿತಾ (47), ಲತಾ (57), ನಸೀಮುಲ್ಲಾ (19) ಹಾಗೂ ಸಲಾವುದ್ದೀನ್ ಅನ್ಸಾರಿ (36) ಎಂದು ಗುರುತಿಸಲಾಗಿದೆ.

ಇನ್ನೊಂದೆಡೆ, ಯಾರಬ್ ನಗರದಲ್ಲಿ ಮಳೆಯ ವೇಳೆ ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿ ಸೈಯದ್ ಸೂಫಿಯಾನ್ ಮೃತಪಟ್ಟಿದ್ದಾರೆ. ಬೈಕ್ ಪಾರ್ಕ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅದೇ ರೀತಿ, ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿನಿ ಫಾರೆಸ್ಟ್ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ರಘು (30-35) ಎಂಬುವವರು ಸಾವನ್ನಪ್ಪಿದ್ದಾರೆ.

Author

ANU News

Follow Me
Other Articles
Previous

Wall Collapse Tragedy in Bengaluru: 7 Dead, Lokayukta Orders Probe

Next

Bengaluru: The death toll in a series of rain-related accidents across the city on Wednesday has risen to 10.

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM-AJAY covers 47,328 villages across India; over 3.28 lakh development works identified
    • Over one crore youth join PM Modi’s anti-drug pledge as ‘Nasha Mukt Yuva’ campaign begins
    • ‘ಮುಂದಿನ 100 ಭಾನುವಾರ ನಶಾ ಮುಕ್ತ ಭಾರತಕ್ಕಾಗಿ’ ರಾಷ್ಟ್ರವ್ಯಾಪಿ ಯುವ ಆಂದೋಲನ; ಪ್ರಧಾನಿ ಮೋದಿ ಕರೆ
    • ಸಂಕಷ್ಟ ಪರಿಹಾರ ಸೂತ್ರ ಜಾರಿಗೊಳಿಸಿ, ರೈತರ ಬೆಳೆಗಳಿಗೆ ಕೂಡಲೇ ನೀರು ಬಿಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
    • K’taka won’t compromise farmers’ interests on Cauvery: DK urges groups to withdraw bandh call
    Copyright 2026 — ANU News. All rights reserved. Blogsy WordPress Theme