Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ

By ANU News
August 24, 2026 1 Min Read
0

ಬೆಂಗಳೂರು: ರಾಜ್ಯದಲ್ಲಿ 10ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ H1N1 ವೈರಲ್ ಫ್ಲೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಮೂಡಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಪರಿಸ್ಥಿತಿ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ H1N1 ಪ್ರಕರಣಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿಲ್ಲ. ಆದರೆ ಬೆಂಗಳೂರಿನಲ್ಲಿ ಪ್ರಕರಣಗಳಲ್ಲಿ ತುಸು ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು.

ಮಕ್ಕಳಲ್ಲಿ ಪದೇಪದೇ ಜ್ವರ ಕಾಣಿಸಿಕೊಳ್ಳುವುದು, ಬಿಟ್ಟುಬಿಟ್ಟು ಚಳಿ, ಮೈಕೈ ನೋವು, ಆಯಾಸ, ಸುಸ್ತು, ನೆಗಡಿ ಹಾಗೂ ಕೆಮ್ಮು ಸೇರಿದಂತೆ H1N1ನ ಲಕ್ಷಣಗಳು ಕಂಡುಬಂದರೆ ಪೋಷಕರು ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಎಚ್ಚರಿಸಿದರು.

ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧೋಪಚಾರ ಮಾಡಬಾರದು ಎಂದು ಸಚಿವರು ಸೂಚಿಸಿದರು.

ಶಾಲಾ ಆಡಳಿತ ಮಂಡಳಿಗಳು ಹಾಗೂ ಪೋಷಕರಿಗಾಗಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಚಿಕಿತ್ಸೆ ನೀಡಬೇಕು. ಇದರಿಂದ ಇತರ ಮಕ್ಕಳಿಗೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇನ್ನು H1N1 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶಾಲೆಗಳು ಏಕಾಏಕಿ ರಜೆ ಘೋಷಿಸುವ ಬದಲು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಯು.ಟಿ. ಖಾದರ್ ಸೂಚಿಸಿದರು.

Author

ANU News

Follow Me
Other Articles
Previous

ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ

Next

H1N1 cases among children see slight uptick in Bengaluru, says Karnataka health minister

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • New legal framework for Karnataka apartment communities: BAF hails KAOMA 2026 as ‘new beginning’ for stronger governance
    • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ
    • H1N1 cases among children see slight uptick in Bengaluru, says Karnataka health minister
    • ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ
    • ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ
    Copyright 2026 — ANU News. All rights reserved. Blogsy WordPress Theme