Skip to content
ANU News
ANU News
  • Home
  • Home
ANU News
ANU News
  • Home
  • Home
ಎಲ್ಲಾ ಸುದ್ದಿಪ್ರಾದೇಶಿಕರಾಜಕೀಯ

ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ: ಹೆಚ್ಚುವರಿ ಖಾತೆ ವಹಿಸಿಕೊಂಡ ಸಿದ್ದರಾಮಯ್ಯ, ಕೆ.ವೆಂಕಟೇಶ್

By ANU News
May 25, 2026 1 Min Read
0

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಖಾತೆಗಳ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ರಾಜಭವನ ಕರ್ನಾಟಕ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರ ಇಲಾಖೆಯ ಹೆಚ್ಚುವರಿ ಹೊಣೆಯನ್ನು ಸಚಿವ ಕೆ. ವೆಂಕಟೇಶ್ ಅವರಿಗೆ ವಹಿಸಲಾಗಿದೆ.

ಇನ್ನೊಂದೆಡೆ, ಕೆ. ಎನ್. ರಾಜಣ್ಣ ರಾಜೀನಾಮೆಯಿಂದ ತೆರವಾಗಿದ್ದ ಸಹಕಾರ ಇಲಾಖೆ ಹಾಗೂ ಬಿ. ನಾಗೇಂದ್ರ ರಾಜೀನಾಮೆಯಿಂದ ಖಾಲಿಯಾಗಿದ್ದ ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಪ್ರಸ್ತುತ ಸಿದ್ದರಾಮಯ್ಯ ಅವರು ಹಣಕಾಸು, ಸಂಸದೀಯ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಸೇರಿದಂತೆ ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಸಹಕಾರ ಇಲಾಖೆಗಳ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.

Author

ANU News

Follow Me
Other Articles
Previous

K’taka to welcome students with festive reopening of schools: Madhu Bangarappa

Next

AYUSHEXCIL, Spices Board join hands to boost global Ayush exports

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಣ, ತಂತ್ರಜ್ಞಾನ ಬಳಸಿಕೊಳ್ಳಿ: ಬುಡಕಟ್ಟು ಯುವಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ
    • ಜಾಗತಿಕ ಭಾರತೀಯ ಪ್ರತಿಭೆಗಳನ್ನು ಭಾರತಕ್ಕೆ ಸೆಳೆಯಲು ‘ಪ್ರಧಾನ ಮಂತ್ರಿ ಸಂಶೋಧನಾ ಪೀಠ’ ಯೋಜನೆ ಆರಂಭ
    • 53 ತಾಯಂದಿರ ಸಾವಿನ ಪ್ರತಿಧ್ವನಿ; NHRC ಮಧ್ಯಪ್ರವೇಶ
    • ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2026ಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ
    • ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ
    Copyright 2026 — ANU News. All rights reserved. Blogsy WordPress Theme