Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ರೇನ್‌ಡಾನ್ಸ್ ಚಿತ್ರೋತ್ಸವದಲ್ಲಿ ಕರ್ನಾಟಕಕ್ಕೆ ಹೆಮ್ಮೆ; ಅನೂಯಾ ಸ್ವಾಮಿ ತಂಡಕ್ಕೆ ಸಿಎಂ ಅಭಿನಂದನೆ

By ANU News
July 3, 2026 1 Min Read
0

ಬೆಂಗಳೂರು: ಲಂಡನ್‌ನಲ್ಲಿ ನಡೆದ 34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಹಾಗೂ ಪಂಕಜಾ ಚಿತ್ರದ ತಂಡಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, “ಕರ್ನಾಟಕವು ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವನ್ನು ಆಚರಿಸುತ್ತಿದೆ” ಎಂದು ಹೇಳಿದ್ದಾರೆ.

34ನೇ ರೇನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅನೂಯಾ ಸ್ವಾಮಿ ಮತ್ತು ಪಂಕಜಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಈ ಸಾಧನೆಯೊಂದಿಗೆ ಅನೂಯಾ ಸ್ವಾಮಿ, ಈ ವಿಭಾಗದಲ್ಲಿ ರೇನ್‌ಡಾನ್ಸ್ ಚಲನಚಿತ್ರೋತ್ಸವದ ಅತ್ಯುನ್ನತ ಗೌರವ ಪಡೆದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಪಂಕಜಾ ಚಿತ್ರ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಪರಿಗಣನೆಗೂ ಅರ್ಹತೆ ಪಡೆದಿದೆ.

“ನಿಮ್ಮ ಈ ಯಶಸ್ಸು ಕರ್ನಾಟಕದ ಕಥೆಗಾರರ ಸೃಜನಶೀಲತೆ, ಪ್ರತಿಭೆ ಮತ್ತು ಅಪಾರ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ. ನೀವು ಮತ್ತು ಇಡೀ ತಂಡ ಇನ್ನಷ್ಟು ಸಾಧನೆಗಳ ಮೆಟ್ಟಿಲೇರಲಿ” ಎಂದು ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ.

Author

ANU News

Follow Me
Other Articles
Previous

Opposition Blames K’taka Government for Quarry Tragedy, Demands Probe

Next

Karnataka Shines at Raindance Film Festival; CM Congratulates ‘Pankaja’ Team

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Veteran elephant Abhimanyu returns to Mysuru Palace ahead of Dasara
    • ಅರಮನೆಗೆ ಅಭಿಮನ್ಯು ಎಂಟ್ರಿ: ಈ ಬಾರಿ ನಿಶಾನೆ ಆನೆಯಾಗಿ ಭಾಗಿ
    • Cauvery Aarti at KRS postponed to Oct 18-23
    • ಕಾವೇರಿ ಆರತಿ ದಿನಾಂಕ ಬದಲು: ಅ.18ರಿಂದ 23ರವರೆಗೆ ಕಾರ್ಯಕ್ರಮ
    • Bhagwant Khuba vows to fight for justice in Sudarshan Ratkale death case
    Copyright 2026 — ANU News. All rights reserved. Blogsy WordPress Theme