Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.

By ANU News
November 20, 2026 1 Min Read
Comments Off on ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.

ಮೂಡಿಗೆರೆ: ಸಹಕಾರಿ ತತ್ವವು ಕೆಲವರ ಅಭಿವೃದ್ಧಿಗೆ ಸೀಮಿತವಾಗದೆ ಸಮಾಜದ ಸರ್ವರ ಏಳಿಗೆಗೆ ನೆರವಾಗಬೇಕು. ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ರೈತಸ್ನೇಹಿ ಸಂಸ್ಥೆಯಾಗಿ ಮತ್ತಷ್ಟು ಬೆಳೆಯಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಆಶಿಸಿದರು.

ಸಂಘದ ವತಿಯಿಂದ ಸುಮಾರು ₹2.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಡಳಿತ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಂಸ್ಥೆಯ 113 ವರ್ಷಗಳ ಇತಿಹಾಸವನ್ನು ಸ್ಮರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲೇ ರೈತರ ನೆರವಿಗಾಗಿ ಮಾಕೋನಹಳ್ಳಿ ಸಿದ್ದೇಗೌಡರು ಮತ್ತು ಕಡವಳ್ಳಿ ಹುಚ್ಚೇಗೌಡರು ಸಹಕಾರಿ ಸಂಸ್ಥೆಗೆ ಅಡಿಪಾಯ ಹಾಕಿದ್ದು ಶ್ಲಾಘನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಮೃದ್ಧಿ’ ಆಶಯದಡಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿರುವುದು ಸಹಕಾರಿ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆ ದೊರೆತಿರುವುದನ್ನು ತೋರಿಸುತ್ತದೆ. ಸಾಮೂಹಿಕ ಅಭಿವೃದ್ಧಿಗೆ ಸಹಕಾರಿ ತತ್ವವೇ ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯೊಂದಿಗೆ ಪಾರದರ್ಶಕತೆಯೂ ಮುಖ್ಯ. ನೂತನ ಕಟ್ಟಡವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆಗೊಳಿಸಬೇಕು ಎಂದು ಸಲಹೆ ನೀಡಿದರು.

ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಸಾಲ ಮತ್ತು ನೆರವು ಅಗತ್ಯವಿದೆ. ಸಹಕಾರಿ ಬ್ಯಾಂಕಿನ ಇತಿಮಿತಿಗಳಲ್ಲಿಯೇ ಮಧ್ಯಮಾವಧಿ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಕೆಸಿಸಿ ಸಾಲದ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲೇಶ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ., ಗಣೇಶ್ ಸೇರಿದಂತೆ ಸಂಘದ ಮಾಜಿ ಪದಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Karnataka Cabinet clears Rs 75 crore farm scheme, approves one lakh houses

Next

ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ

Recent Posts

  • 2029ರ ವೇಳೆಗೆ €20 ಬಿಲಿಯನ್ ವ್ಯಾಪಾರ ಗುರಿಗೆ ಭಾರತ-ಇಟಲಿ ಒತ್ತು
  • Envoys of Greece, Spain and Nepal Present Credentials to President Murmu
  • ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ
  • ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.
  • Karnataka Cabinet clears Rs 75 crore farm scheme, approves one lakh houses
Copyright 2026 — ANU News. All rights reserved. Blogsy WordPress Theme