Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ

By ANU News
November 20, 2026 1 Min Read
Comments Off on ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್‌ನಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಜೋಡಿ ಕಾಡಾನೆಗಳನ್ನು ನವೆಂಬರ್ 19ರಂದು ಅರಣ್ಯ ಇಲಾಖೆ ಸೆರೆಹಿಡಿದಿದೆ. ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎರಡು ಆನೆಗಳನ್ನು ಏಕಕಾಲದಲ್ಲಿ ಸೆರೆಹಿಡಿಯಲಾಗಿದೆ.

ಕಳೆದ ಮೂರು ದಿನಗಳಿಂದ ಕುಮ್ಕಿ ಆನೆ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಡ್ರೋನ್ ಮೂಲಕ ಆನೆಗಳ ಸ್ಥಳ ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಲಾಯಿತು. ಬಳಿಕ ಶ್ರೀಕಂಠ, ಅಶೋಕ, ರೋಹಿತ್, ಮಾಣಿಕ್ಯ, ಅಯ್ಯಪ್ಪ ಮತ್ತು ಏಕಲವ್ಯ ಕುಮ್ಕಿ ಆನೆಗಳ ನೆರವಿನಿಂದ ಎರಡೂ ಸಲಗಗಳನ್ನು ಸೆರೆಹಿಡಿಯಲಾಯಿತು.

ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ಜಯಮ್ಮ ಹಾಗೂ ನವೆಂಬರ್ 16ರಂದು ಕಾಫಿ ತೋಟಕ್ಕೆ ತೆರಳುತ್ತಿದ್ದ ಹಫೀಜ್ ಆನೆ ದಾಳಿಗೆ ಬಲಿಯಾಗಿದ್ದರು.

ಹಲವು ತಿಂಗಳಿಂದ ಜೊತೆಯಾಗಿ ಸಂಚರಿಸುತ್ತಿದ್ದ ಈ ಆನೆಗಳು ಅರೆಹಳ್ಳಿ ಮತ್ತು ಬಿಕ್ಕೋಡು ಭಾಗಗಳಲ್ಲಿ ಕಾರ್ಯಾಚರಣೆ ತಂಡಕ್ಕೆ ಸವಾಲಾಗಿದ್ದವು. ಸತತ ಕಾರ್ಯಾಚರಣೆಯ ಬಳಿಕ ಎರಡೂ ಆನೆಗಳು ಅರಣ್ಯ ಇಲಾಖೆ ಬಲೆಗೆ ಬಿದ್ದಿವೆ.

Author

ANU News

Follow Me
Other Articles
Previous

ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.

Next

Envoys of Greece, Spain and Nepal Present Credentials to President Murmu

Recent Posts

  • 2029ರ ವೇಳೆಗೆ €20 ಬಿಲಿಯನ್ ವ್ಯಾಪಾರ ಗುರಿಗೆ ಭಾರತ-ಇಟಲಿ ಒತ್ತು
  • Envoys of Greece, Spain and Nepal Present Credentials to President Murmu
  • ಹಾಸನದಲ್ಲಿ ಇಬ್ಬರ ಬಲಿ ಪಡೆದ ಜೋಡಿ ಕಾಡಾನೆಗಳು ಸೆರೆ
  • ರೈತಸ್ನೇಹಿ ಸಹಕಾರಿ ಸಂಸ್ಥೆಯಾಗಿ ಟಿಎಪಿಸಿಎಂಎಸ್ ಬೆಳೆಯಲಿ: ಡಾ. ರವಿ ಸಿ.ಟಿ.
  • Karnataka Cabinet clears Rs 75 crore farm scheme, approves one lakh houses
Copyright 2026 — ANU News. All rights reserved. Blogsy WordPress Theme