Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶ

ಲಸಿಕೆ, ಕ್ಯಾನ್ಸರ್ ಔಷಧಿಗಳಿಗೆ QR ಕೋಡ್ ಕಡ್ಡಾಯ: ಔಷಧ ಟ್ರ್ಯಾಕಿಂಗ್ ವ್ಯವಸ್ಥೆ ವಿಸ್ತರಿಸಿದ ಕೇಂದ್ರ

By ANU News
June 26, 2026 1 Min Read
0

ನವದೆಹಲಿ: ಔಷಧಗಳ ಸುರಕ್ಷತೆ ಹೆಚ್ಚಿಸುವ ಹಾಗೂ ನಕಲಿ ಔಷಧಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು QR ಕೋಡ್ ಆಧಾರಿತ ಔಷಧ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಮುಂದೆ ಲಸಿಕೆಗಳು, ಆಂಟಿಮೈಕ್ರೊಬಿಯಲ್ ಔಷಧಿಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಹಾಗೂ ಮಾದಕ ಮತ್ತು ಸೈಕೋಟ್ರೋಪಿಕ್ ಔಷಧಿಗಳ ಮೇಲೂ ಈ ನಿಯಮ ಅನ್ವಯವಾಗಲಿದೆ.

ಈ ಸಂಬಂಧ 1945ರ ಔಷಧ ನಿಯಮಗಳಿಗೆ ತಿದ್ದುಪಡಿ ಪ್ರಕಟಿಸಿರುವ ಸಚಿವಾಲಯ, ಮೇಲ್ಕಂಡ ಔಷಧ ವರ್ಗಗಳನ್ನು ‘ಷೆಡ್ಯೂಲ್ H2’ ವ್ಯಾಪ್ತಿಗೆ ಸೇರಿಸಿದೆ. ಇದರ ಅನ್ವಯ, ಔಷಧಗಳ ಪ್ಯಾಕೇಜಿಂಗ್ ಮೇಲೆ ಬಾರ್‌ಕೋಡ್ ಅಥವಾ QR ಕೋಡ್ ಅಳವಡಿಸುವುದು ಕಡ್ಡಾಯವಾಗಲಿದೆ.

ಹೊಸ ನಿಯಮಗಳ ಪ್ರಕಾರ, ಔಷಧ ತಯಾರಕರು ಉತ್ಪನ್ನದ ಜೆನೆರಿಕ್ ಮತ್ತು ಬ್ರಾಂಡ್ ಹೆಸರು, ತಯಾರಕ ಸಂಸ್ಥೆಯ ವಿವರ, ಬ್ಯಾಚ್ ಸಂಖ್ಯೆ, ಉತ್ಪಾದನೆ ಹಾಗೂ ಅವಧಿ ಮುಕ್ತಾಯ ದಿನಾಂಕ, ಪರವಾನಗಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು QR ಕೋಡ್‌ನಲ್ಲಿ ದಾಖಲಿಸಿ ಪ್ಯಾಕೇಜ್ ಮೇಲೆ ಮುದ್ರಿಸಬೇಕು ಅಥವಾ ಅಂಟಿಸಬೇಕು.

ಈ ಕ್ರಮದಿಂದ ಔಷಧಗಳ ಮೂಲವನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗಲಿದ್ದು, ಪೂರೈಕೆ ಸರಪಳಿಯ ಪಾರದರ್ಶಕತೆ ಹೆಚ್ಚಲಿದೆ. ಜೊತೆಗೆ, ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳ ವಿತರಣೆಯನ್ನು ತಡೆಯಲು ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಇದು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ದೇಶದ ಅಗ್ರ 300 ಔಷಧ ಬ್ರಾಂಡ್‌ಗಳಿಗೆ ಮಾತ್ರ QR ಕೋಡ್ ವ್ಯವಸ್ಥೆ ಕಡ್ಡಾಯವಾಗಿತ್ತು. ಇದೀಗ ಹೊಸ ತಿದ್ದುಪಡಿಯೊಂದಿಗೆ ಇದರ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ.

ಲಸಿಕೆಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಹಾಗೂ ಮಾದಕ ಮತ್ತು ಸೈಕೋಟ್ರೋಪಿಕ್ ಔಷಧಿಗಳಿಗೆ ಸಂಬಂಧಿಸಿದ ಹೊಸ ನಿಯಮಗಳು 2027ರ ಜುಲೈ 1ರಿಂದ ಜಾರಿಗೆ ಬರಲಿವೆ. ಆಂಟಿಮೈಕ್ರೊಬಿಯಲ್ ಔಷಧಿಗಳಿಗೆ 2028ರ ಜುಲೈ 1ರಿಂದ ಈ ನಿಯಮ ಕಡ್ಡಾಯವಾಗಲಿದೆ. ಗಡುವಿಗೂ ಮುನ್ನವೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಔಷಧ ತಯಾರಕರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿದೆ.

Author

ANU News

Follow Me
Other Articles
Previous

Centre expands QR code-based drug tracking to vaccines, cancer medicines

Next

Centre restores commercial LPG supplies after easing of West Asia crisis

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • CM Vijay joins anti-drug awareness run, covers 6 km with participants in Chennai
    • ಮಾದಕ ದ್ರವ್ಯ ವಿರುದ್ಧ ಬೀದಿಗಿಳಿದ ಸಿಎಂ ದಳಪತಿ ವಿಜಯ್ : ಚೆನ್ನೈನಲ್ಲಿ 6 ಕಿ.ಮೀ ‘ಸ್ಟಾರ್ಟ್ ರನ್
    • Tejasvi Surya slams BMRCL over repeated Namma Metro disruptions, seeks answers
    • 2024ರಿಂದ 21 ಬಾರಿ ಕೈಕೊಟ್ಟ ನಮ್ಮ ಮೆಟ್ರೋ; ಬಿಎಂಆರ್‌ಸಿಎಲ್‌ಗೆ ತೇಜಸ್ವಿ ಸೂರ್ಯ ತರಾಟೆ
    • ಐಸ್ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಕಮಾಲ್: ದಶೇರಿ, ಚೌಸಾ, ಲ್ಯಾಂಗ್ರಾ , ಕೇಸರ್ ಹಣ್ಣುಗಳೇ ಫಿದಾ
    Copyright 2026 — ANU News. All rights reserved. Blogsy WordPress Theme