Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ವಿಶ್ವಾದ್ಯಂತ ‘ಟಾಕ್ಸಿಕ್’ ಅಬ್ಬರ; ಎಲ್ಲೆಡೆ ಯಶ್ ಅಭಿಮಾನಿಗಳ ಸಂಭ್ರಮ

By ANU News
August 26, 2026 1 Min Read
0

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ನಾಲ್ಕು ವರ್ಷಗಳಿಂದ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಫ್ಯಾನ್ ಶೋಗಳಿಗೆ ಮುಗಿಬಿದ್ದಿದ್ದಾರೆ.

ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೇ 1,500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಮುಂಜಾನೆ ಶೋಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಶ್ ಅವರ ತವರು ಜಿಲ್ಲೆ ಹಾಸನದಲ್ಲೂ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ನಗರದ ಫ್ಯಾನ್ ಶೋಗೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಕಮ್‌ಬ್ಯಾಕ್‌ನ್ನು ಸಂಭ್ರಮಿಸಿದರು.

ಚಿಕ್ಕಬಳ್ಳಾಪುರದಲ್ಲೂ ‘ಟಾಕ್ಸಿಕ್’ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳ ಉತ್ಸಾಹ ಕಂಡುಬಂತು. ಚಿತ್ರಮಂದಿರದ ಎದುರು ಬೃಹತ್ ಕಟೌಟ್‌ಗಳನ್ನು ಅಳವಡಿಸಿ, ಪಟಾಕಿ ಸಿಡಿಸಿ, ತಮಟೆ ಬಾರಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಚಿತ್ರಮಂದಿರಗಳ ಮುಂಭಾಗ ಯಶ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ, ಹಾರ ಹಾಕುವುದು ಸೇರಿದಂತೆ ವಿವಿಧ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. ಬಿಡುಗಡೆಯ ಮುನ್ನವೇ ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್‌ನಲ್ಲೂ ಭರ್ಜರಿ ದಾಖಲೆ ನಿರ್ಮಿಸಿದ್ದು, ಸುಮಾರು ₹70 ಕೋಟಿ ಸಂಗ್ರಹಿಸಿದೆ ಎನ್ನಲಾಗಿದೆ. ಇದೀಗ ಚಿತ್ರದ ವಿಮರ್ಶೆ ಹಾಗೂ ಬಾಕ್ಸ್ ಆಫೀಸ್ ಪ್ರತಿಕ್ರಿಯೆ ಮೇಲೆ ಸಿನಿಪ್ರಿಯರ ಗಮನ ನೆಟ್ಟಿದೆ.

Author

ANU News

Follow Me
Other Articles
Previous

ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ

Next

‘Toxic’ Opens to Massive Fan Frenzy Worldwide

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka Congress Leaders Join INDIA Bloc Protest Against SIR, Demand CEC’s Resignation
    • ಎಸ್‌ಐಆರ್ ರದ್ದತಿಗೆ ಆಗ್ರಹ: ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ, ರಾಜ್ಯ ಕಾಂಗ್ರೆಸ್ ನಾಯಕರ ಭಾಗಿ
    • ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ಪ್ರತಿಭಟನೆ: ಅರವಿಂದ್ ಕೇಜ್ರಿವಾಲ್ ಸೇರಿ ಆಪ್ ನಾಯಕರ ವಿರುದ್ಧ ಎಫ್‌ಐಆರ್
    • FIR Against Arvind Kejriwal, AAP Leaders Over Protest at Bangla Sahib Gurdwara
    • CJP Gives Delhi Police 24-Hour Deadline to Set Protest Date at Jantar Mantar
    Copyright 2026 — ANU News. All rights reserved. Blogsy WordPress Theme