Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಚಿವ ಸ್ಥಾನ ಸಿಗದ ಶಾಸಕರಿಗೆ JDS ಓಪನ್ ಆಫರ್; ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಸಂಚಲನ

By ANU News
August 9, 2026 1 Min Read
0

ಹಾಸನ: ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್​​​​ನಲ್ಲಿ ಅಸಮಧಾನ ಸ್ಫೋಟಗೊಂಡಿದೆ. ಮಂತ್ರಿ ಸ್ಥಾನ ಸಿಗದ ಶಾಸಕರು ಪಕ್ಷದ ನಡೆಗೆ ಬೇಸರಗೊಂಡಿದ್ದು, ಅನೇಕರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ಬಹುತೇಕ ಮಂದಿ ರಾಜೀನಾಮೆಯಿಂದ ಹಿಂದೆ ಸರಿದಿರುವುದಾಗಿ ಹೇಳಿಕೊಂಡರೂ ಕಾಂಗ್ರೆಸ್ ಶಾಸಕರ ಪಾಳಯದಲ್ಲಿ ಅಸಮಾಧಾನ ಇನ್ನೂ ಹೊಗೆಯಾಡುತ್ತಿದೆ. ಇದೀಗ ಅವರನ್ನು ಸಮಾಧಾನಪಡಿಸಲು ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಸಚಿವರು ಮನೆ ಮನೆಗೆ ತೆರಳಿ ಮಾತುಕತೆ ಮೂಲಕ ಮನವೊಲಿಸುವ ಯತ್ನ ನಡೆಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ಜೆಡಿಎಸ್ ನಾಯಕರೂ ಆದ ಕೇಂದ್ರ ಸಚಿವ ಹೆಚ್​​​.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುತೂಹಲಕ್ಕೆ ನಾಂದಿ ಹಾಡಿದೆ. ಕಾಂಗ್ರೆಸ್ ಅಸಮಧಾನಿತ ಶಾಸಕರಿಗೆ ಅವರು ಗಾಳ ಹಾಕಿದಂತಿದ್ದು, ಜೆಡಿಎಸ್​​​​​​ಗೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ.

ಹಾಸನದ ಹರದನಹಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನೋವು ಮತ್ತು ಸಮಸ್ಯೆಯಲ್ಲಿರುವವರಿಗೆ ಪರಿಹಾರ ನೀಡುವ ಪಕ್ಷ ಎಂದು ಹೇಳಿದರು.

“ನೊಂದವರಿಗೆ, ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುತ್ತದೆ. ನೋವಿಗೆ ಪರಿಹಾರವೂ ಸಿಗುತ್ತದೆ” ಎಂದು ಹೇಳುವ ಮೂಲಕ ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಪರೋಕ್ಷವಾಗಿ ಆಹ್ವಾನ ನೀಡಿದರು.

ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅಸಮಾಧಾನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಈ ಹೇಳಿಕೆಯಿಂದ ಮತ್ತಷ್ಟು ಸ್ಪಷ್ಟವಾಗಿದೆ..

Author

ANU News

Follow Me
Other Articles
Previous

Mobile phones to be banned in major Tamil Nadu temples

Next

JDS open-door offer to disgruntled Karnataka Congress MLAs

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Sri Raghavendra Mahime’ staged in Bengaluru; social workers, artists felicitated
    • ಯಕ್ಷಗಾನ ರೂಪಕದಲ್ಲಿ ‘ಶ್ರೀ ರಾಘವೇಂದ್ರ ಮಹಿಮೆ’; ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸಾಧಕರಿಗೆ ಪುರಸ್ಕಾರ
    • ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿತ್ತು’: ಪ್ರಧಾನಿ ಮೋದಿ
    • ‘Quit India call infused new energy into freedom struggle’: PM Modi
    • VP Radhakrishnan launches Har Ghar Tiranga campaign in Andaman & Nicobar
    Copyright 2026 — ANU News. All rights reserved. Blogsy WordPress Theme