Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶವೈವಿಧ್ಯ

ಸೆ.18ರಿಂದ ರಾಷ್ಟ್ರವ್ಯಾಪಿ ಸಂಕಲ್ಪ ಸಮಾರಂಭ; 300 ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಜ್ಞೆ, ಸಹಿ ಸಂಗ್ರಹ

By ANU News
September 18, 2026 1 Min Read
0

ನವದೆಹಲಿ: ಮಾದಕವಸ್ತು ದುರುಪಯೋಗದ ವಿರುದ್ಧ ಯುವಜನರನ್ನು ಸಂಘಟಿಸಿ ನಿರಂತರ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 100 ವಾರಗಳ ‘ನಶಾ ಮುಕ್ತ ಯುವ ಅಭಿಯಾನ’ಕ್ಕೆ ಸೆ.18ರಿಂದ ನಡೆಯಲಿದೆ. ದೇಶಾದ್ಯಂತ ‘ರಾಷ್ಟ್ರೀಯ ಸಂಕಲ್ಪ ಸಮಾರಂಭ’, ಯುವಜನರ ಪ್ರತಿಜ್ಞೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆ, ಮೇರಾ ಯುವ ಭಾರತ್ (MY Bharat) ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ಸಹಯೋಗದಲ್ಲಿ ಅಭಿಯಾನವನ್ನು ಮುನ್ನಡೆಸಲಿದೆ.

300 ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ

ಸೆ.18ರಂದು NSS ಗುರುತಿಸಿರುವ 300 ಶಿಕ್ಷಣ ಸಂಸ್ಥೆಗಳಲ್ಲಿ ಉದ್ಘಾಟನಾ ರಾಷ್ಟ್ರೀಯ ಸಂಕಲ್ಪ ಸಮಾರಂಭ ನಡೆಯಲಿದೆ. ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಬೀದಿ ನಾಟಕ, ಘೋಷವಾಕ್ಯ ರಚನೆ ಹಾಗೂ ಯುವಜನರ ನೇತೃತ್ವದ ಚರ್ಚೆಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ.

ಆಧ್ಯಾತ್ಮಿಕ ಸಂಘಟನೆಗಳು, ಕೈಗಾರಿಕಾ ಸಂಘಗಳು, ಎನ್‌ಜಿಒಗಳು ಮತ್ತು ವಿಶ್ವವಿದ್ಯಾಲಯ ಸಂಘಟನೆಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 2ರಂದು ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆರಂಭದಿಂದಲೂ 30,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಟುವಟಿಕೆ ನಡೆದಿದ್ದು, 2.5 ಕೋಟಿಗೂ ಅಧಿಕ ವೀಕ್ಷಣೆ ಹಾಗೂ 1 ಕೋಟಿಗೂ ಹೆಚ್ಚು ಪ್ರತಿಜ್ಞೆಗಳು ದಾಖಲಾಗಿವೆ.

ನಾಲ್ಕು ಪ್ರಮುಖ ಸ್ತಂಭ

ಸೆ.20ರಂದು ಅಭಿಯಾನದ ಮೊದಲ ಭಾನುವಾರವನ್ನು ಆಚರಿಸಲಾಗುತ್ತಿದ್ದು, ಜಿಲ್ಲಾ ಕಚೇರಿ ಹಾಗೂ ಯುವ ಹಾಸ್ಟೆಲ್‌ಗಳು ಸೇರಿದಂತೆ 485 MY Bharat ಘಟಕಗಳಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ.

‘ತಡೆಗಟ್ಟುವಿಕೆ, ರಕ್ಷಣೆ, ಚೇತರಿಕೆ ಮತ್ತು ನಾಯಕತ್ವ’ ಎಂಬ ನಾಲ್ಕು ಸ್ತಂಭಗಳ ಆಧಾರದಲ್ಲಿ ಅಭಿಯಾನ ರೂಪಿಸಲಾಗಿದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್ 2026ರವರೆಗೆ 12 ವಾರಗಳ ಚಟುವಟಿಕೆಗಳ ಕ್ಯಾಲೆಂಡರ್ ಜಾರಿಯಲ್ಲಿರಲಿದೆ.

ಆರೋಗ್ಯ ತಪಾಸಣೆ, BMI ಶಿಬಿರ, ಯೋಗ, ಧ್ಯಾನ, ಆರೋಗ್ಯ ನಡಿಗೆ, ಓಟ, ಯುವ ಮೇಳ, ಸಾಂಪ್ರದಾಯಿಕ ಕ್ರೀಡೆ, ಮಿನಿ ಮ್ಯಾರಥಾನ್, ಸೈಕ್ಲೋಥಾನ್ ಹಾಗೂ ಜೀವನ ಕೌಶಲ್ಯ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.

NSS ಮೂಲಕ 11 ವಾರಗಳಲ್ಲಿ ಸುಮಾರು 2,500 ಕಾರ್ಯಕ್ರಮ, MY Bharat ಮೂಲಕ 12 ವಾರಗಳಲ್ಲಿ 3,235 ಘಟಕಮಟ್ಟದ ಚಟುವಟಿಕೆ ನಡೆಸುವ ಗುರಿ ಹೊಂದಲಾಗಿದೆ. ಭಾಗವಹಿಸುವಿಕೆ, ಛಾಯಾಚಿತ್ರ, ವೀಡಿಯೊ ಸೇರಿದಂತೆ ವಿವಿಧ ದಾಖಲೆಗಳ ಮೂಲಕ ಅಭಿಯಾನದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

Author

ANU News

Follow Me
Other Articles
Previous

100-week Nasha Mukt Yuva Abhiyan to begin with nationwide youth pledge campaign

Next

CCI approves acquisition of Rajasthan Royals, Paarl Royals and Barbados Royals

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Vote theft, government theft, now party theft’: Rahul Gandhi hits out at EC over TMC symbol freeze
    • ‘ಮತ ಕಳ್ಳತನ, ಸರ್ಕಾರ ಕಳ್ಳತನ, ಈಗ ಪಕ್ಷ ಕಳ್ಳತನ’; TMC ಚಿಹ್ನೆ ನಿರ್ಬಂಧ ಕ್ರಮಕ್ಕೆ ರಾಹುಲ್ ಆಕ್ಷೇಪ
    • ಐಪಿಎಲ್‌ನ ರಾಜಸ್ಥಾನ ರಾಯಲ್ಸ್, ದಕ್ಷಿಣ ಆಫ್ರಿಕಾದ ಪಾರ್ಲ್ ರಾಯಲ್ಸ್, ಬಾರ್ಬಡೋಸ್‌ನ ಬಾರ್ಬಡೋಸ್ ರಾಯಲ್ಸ್ ತಂಡಗಳ ಸ್ವಾಧೀನಕ್ಕೆ CCI ಅನುಮೋದನೆ
    • CCI approves acquisition of Rajasthan Royals, Paarl Royals and Barbados Royals
    • ಸೆ.18ರಿಂದ ರಾಷ್ಟ್ರವ್ಯಾಪಿ ಸಂಕಲ್ಪ ಸಮಾರಂಭ; 300 ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಜ್ಞೆ, ಸಹಿ ಸಂಗ್ರಹ
    Copyright 2026 — ANU News. All rights reserved. Blogsy WordPress Theme