Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

‘ಬೆಂಕಿ’ ವದಂತಿಗೆ ರೈಲಿನಿಂದ ಜಿಗಿದ ನಾಲ್ವರು ಮತ್ತೊಂದು ರೈಲಿನಡಿ ಬಿದ್ದು ಸಾವು

By Anu News
June 15, 2026 1 Min Read
0

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಗೆ ಭಯಗೊಂಡು ರೈಲಿನಿಂದ ಜಿಗಿದ ನಾಲ್ವರು ಪ್ರಯಾಣಿಕರು ಮತ್ತೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೊರೆನಾ ಜಿಲ್ಲೆಯ ಹೇತಾಂಪುರ ರೈಲು ನಿಲ್ದಾಣದ ಸಮೀಪ ಶನಿವಾರ ಸಂಜೆ ಈ ದುರ್ಘಟನೆ ನಡೆದಿದೆ. ಖಜುರಾಹೊ–ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಸುದ್ದಿ ಬೋಗಿಗಳಲ್ಲಿ ವೇಗವಾಗಿ ಹರಡಿತ್ತು.

ಈ ನಡುವೆ ಸಾಮಾನ್ಯ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ತುರ್ತು ಸರಪಳಿ ಎಳೆದ ಪರಿಣಾಮ ರೈಲು ಹೇತಾಂಪುರ–ಧೋಲ್ಪುರ್ ವಿಭಾಗದಲ್ಲಿ ನಿಂತಿದೆ. ರೈಲು ನಿಂತ ತಕ್ಷಣ ಆತಂಕಕ್ಕೊಳಗಾದ ಹಲವರು ಕೆಳಗಿಳಿದು ಪಕ್ಕದ ಹಳಿಯತ್ತ ಓಡಿದ್ದಾರೆ.

ಆದರೆ ಅದೇ ಸಮಯದಲ್ಲಿ ಎದುರಿನ ದಿಕ್ಕಿನಿಂದ ಫಿರೋಜ್‌ಪುರ–ಸಿಯೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್ ವೇಗವಾಗಿ ಬರುತ್ತಿದ್ದು, ಹಳಿಯ ಮೇಲೆ ಇದ್ದ ಕೆಲವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಯಾರೋ “ಬೆಂಕಿ… ಬೆಂಕಿ…” ಎಂದು ಕೂಗಿದ ಕಾರಣ ಪ್ರಯಾಣಿಕರಲ್ಲಿ ಭೀತಿ ಉಂಟಾಗಿದೆ. ಬಳಿಕ ಚೈನ್ ಎಳೆಯಲ್ಪಟ್ಟು ರೈಲು ನಿಂತಿದ್ದು, ಗಾಬರಿಗೊಂಡ ಕೆಲವರು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಹಳಿಯ ಮೇಲೆ ಓಡಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಬೆಂಕಿಯ ವದಂತಿ ಹೇಗೆ ಹರಡಿತು, ಚೈನ್ ಎಳೆದವರು ಯಾರು ಹಾಗೂ ಪ್ರಯಾಣಿಕರು ಪಕ್ಕದ ಹಳಿಗೆ ಇಳಿಯಲು ಕಾರಣವೇನು ಎಂಬ ಕುರಿತು ರೈಲ್ವೆ ಇಲಾಖೆ ಸಮಗ್ರ ತನಿಖೆ ಆರಂಭಿಸಿದೆ. ಈ ದುರ್ಘಟನೆ ರೈಲು ಪ್ರಯಾಣದ ವೇಳೆ ವದಂತಿಗಳಿಗೆ ಕಿವಿಗೊಡುವುದರಿಂದ ಉಂಟಾಗುವ ಅಪಾಯದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದಂತಾಗಿದೆ.

Author

Anu News

Follow Me
Other Articles
Previous

ಸೋಮಾವತಿ ಅಮಾವಾಸ್ಯೆ; ಹರಿವಾದಲ್ಲಿ ಯಾಕಿಷ್ಟು ಜನಸಾಗರ?

Next

ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ನೀರುಪಾಲು

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme