Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ನೀರುಪಾಲು

By Anu News
June 15, 2026 1 Min Read
0

ಹಾಸನ: ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ಯುವಕರ ತಂಡಕ್ಕೆ ಭೀಕರ ದುರಂತ ಎದುರಾಗಿದ್ದು, ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ಮೂಲದ ಯುವಕರ ತಂಡ ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿಗೆ ಈಜಾಡಲು ಇಳಿದಿತ್ತು. ಈ ವೇಳೆ ನೀರಿನ ಆಳ ತಿಳಿಯದೆ ಮೂವರು ಯುವಕರು ಮುಳುಗಿ ನೀರುಪಾಲಾಗಿದ್ದಾರೆ.

ಈಜು ಬಾರದಿದ್ದರೂ ಜಲಾಶಯದ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಸ್ನೇಹಿತರ ಕಣ್ಣೆದುರೇ ಯುವಕರು ಮುಳುಗುತ್ತಿದ್ದರೂ ರಕ್ಷಿಸಲು ಸಾಧ್ಯವಾಗದೆ ಉಳಿದವರು ಅಸಹಾಯಕವಾಗಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತರನ್ನು 20 ವರ್ಷದ ಮಣಿಕಂಠ, ಚರಣ್ ಹಾಗೂ 23 ವರ್ಷದ ಮಿಲನ್ ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನೀರುಪಾಲಾದ ಯುವಕರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜಲಾಶಯಗಳು ಹಾಗೂ ಅಪಾಯಕಾರಿ ನೀರಿನ ಪ್ರದೇಶಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

Author

Anu News

Follow Me
Other Articles
Previous

‘ಬೆಂಕಿ’ ವದಂತಿಗೆ ರೈಲಿನಿಂದ ಜಿಗಿದ ನಾಲ್ವರು ಮತ್ತೊಂದು ರೈಲಿನಡಿ ಬಿದ್ದು ಸಾವು

Next

ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್, ಜೂನ್ 19ರಂದು ಶಾಂತಿ ಒಪ್ಪಂದಕ್ಕೆ ಸಹಿ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Cauvery dispute: Karnataka govt to move Supreme Court against 6,000-cusecs release order
    • ಕಾವೇರಿ ವಿವಾದ: ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಕರ್ನಾಟಕ ತಯಾರಿ
    • AP Govt announces free electricity for Ganesh pandals during festival
    • ಆಂಧ್ರಪ್ರದೇಶದಲ್ಲಿ ಈ ಬಾರಿ ವಿಶೇಷ ಗಣೇಶ ಚತುರ್ಥಿ; ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ
    • ಮೋದಿಯ 25 ವರ್ಷಗಳ ಸಾರ್ವಜನಿಕ ಸೇವೆ; ಸೆ.17ರಿಂದ ಅ.17ರವರೆಗೆ ಬಿಜೆಪಿಯಿಂದ ‘ಸೇವಾ ಸಂಕಲ್ಪ ಅಭಿಯಾನ’
    Copyright 2026 — ANU News. All rights reserved. Blogsy WordPress Theme