Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

‘ಮಾ ಇಂಟಿ ಬಂಗಾರಂ’; ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ? ಎಂಬ ಪ್ರಶ್ನೆಗೆ ಸಿಕ್ತು ‘100 ಕೋಟಿ’ಯ ಉತ್ತರ

By ANU News
July 13, 2026 1 Min Read
0

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಬಿ.ವಿ. ನಂದಿನಿ ರೆಡ್ಡಿ ನಿರ್ದೇಶಿಸಿರುವ ಈ ತೆಲುಗು ಆ್ಯಕ್ಷನ್–ಕಾಮಿಡಿ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಹಾಗೂ ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.

100 ಕೋಟಿ ಗಳಿಕೆಯ ಸಂಭ್ರಮವನ್ನು ಸಮಂತಾ ತಮ್ಮ ಮನೆಯಲ್ಲಿ ಆಚರಿಸಿದ್ದು, ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ರಾಜ್ ನಿಡಿಮೋರು ಚಿತ್ರದ ಗಳಿಕೆ ಕುರಿತು ತಿಳಿಸುತ್ತಿದ್ದಂತೆ ಸಮಂತಾ ಸಂತಸ ವ್ಯಕ್ತಪಡಿಸಿ, ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಚಿತ್ರದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಸಮಂತಾ, ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಚಿತ್ರಮಂದಿರ ಮಾಲೀಕರು ಸೇರಿದಂತೆ ಹಲವರಿಗೆ ಅನುಮಾನವಿತ್ತು ಎಂದು ಹೇಳಿದ್ದಾರೆ. “ಮಹಿಳಾ ಪ್ರಧಾನ ಚಿತ್ರಗಳನ್ನು ಯಾರು ನೋಡುತ್ತಾರೆ?” ಎಂಬ ಪ್ರಶ್ನೆಯನ್ನೇ ಹಲವರು ಎತ್ತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಈ ಯಶಸ್ಸು ಮಹಿಳಾ ಪ್ರಧಾನ ಸಿನಿಮಾಗಳಿಗೂ ಪ್ರೇಕ್ಷಕರು ಉತ್ತಮ ಬೆಂಬಲ ನೀಡುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದು, ಚಿತ್ರರಂಗದಲ್ಲಿ ಹೊಸ ಬದಲಾವಣೆಗೆ ಇದು ನಾಂದಿ ಹಾಡಲಿದೆ ಎಂದು ಸಮಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಚಿತ್ರಗಳಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯಲಿ ಎಂದು ಅವರು ಆಶಿಸಿದ್ದಾರೆ.

Author

ANU News

Follow Me
Other Articles
Previous

Bengaluru Hebbal Police Bust Major MDMA Network; ₹34 Crore Worth of Drugs Seized, Four Arrested

Next

‘Maa Inti Bangaram’; Samantha Says Success Silences Doubts Over Women-Centric Films

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘ಆಗಸ್ಟ್‌ನಲ್ಲೇ ನಾಲ್ವರು ರೈತರ ಆತ್ಮಹತ್ಯೆ’; ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ
    • KPSC row: Priyank Kharge hits back at Kumaraswamy, questions his role in recruitment controversy
    • ‘Four farmers died by suicide in August alone’: B.Y. Vijayendra targets Karnataka govt
    • PM Modi conferred Uzbekistan’s highest honour for foreign leaders
    • ‘ಕೆಪಿಎಸ್ಸಿ ಅಕ್ರಮದ ಜಾತಕ ಜಾಲಾಡಿದರೆ ಕುಮಾರಸ್ವಾಮಿ ಕುಂಡಲಿಯೇ ಕಾಣುತ್ತದೆ’: ಪ್ರಿಯಾಂಕ್ ಖರ್ಗೆ
    Copyright 2026 — ANU News. All rights reserved. Blogsy WordPress Theme