Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರಾಜ್ಯವೇ ಬರ ಬಗ್ಗೆ ಘೋಷಣೆ ಮಾಡದಿದ್ದರೆ ಕೇಂದ್ರ ತಂಡ ಹೇಗೆ ಬರುತ್ತದೆ?: ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

By ANU News
July 27, 2026 1 Min Read
0

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಸರ್ಕಾರ ಇನ್ನೂ ಅಧಿಕೃತವಾಗಿ ಬರ ಘೋಷಣೆ ಮಾಡಿಲ್ಲ. ಹೀಗಿರುವಾಗ ಬರ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ತಂಡ ಹೇಗೆ ಬರಲು ಸಾಧ್ಯ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರೂ ಎಷ್ಟು ಪರಿಹಾರ ಘೋಷಿಸಿದ್ದಾರೆ ಎಂದು ಪ್ರಶ್ನಿಸಿದರು. ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಕೇವಲ ಕಾಟಾಚಾರಕ್ಕೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ದೆಹಲಿಗೆ ತೆರಳುತ್ತಿದ್ದಾರೆ ಎಂದು ಟೀಕಿಸಿದರು.

ತಾವು ಈಗಾಗಲೇ ಮಂಡ್ಯ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮುಂದಿನ ವಾರ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಭೇಟಿ ನೀಡುವುದಾಗಿ ಅಶೋಕ್ ತಿಳಿಸಿದರು.

ಬರ ಘೋಷಣೆ ಮಾಡಿದರೆ ಮೊದಲ ಹಂತದ ಪರಿಹಾರವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಬೇಕಾಗುತ್ತದೆ. ಆದರೆ ಅದನ್ನು ಮಾಡದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲಾಗುತ್ತಿದೆ. ರಾಜ್ಯ ಸರ್ಕಾರವೇ ಬರದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸದಿದ್ದರೆ ಕೇಂದ್ರದ ತಂಡ ಹೇಗೆ ಬರಲಿದೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿಗಳ ವರದಿ ಪಡೆದಿದ್ದಾರೆಯೇ? ಆ ವರದಿ ಆಧರಿಸಿ ಪರಿಹಾರ ಬಿಡುಗಡೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬರ ಅಧ್ಯಯನಕ್ಕೆ ಕೇಂದ್ರ ತಂಡ ಆಗಮಿಸುವ ಮೊದಲು ರಾಜ್ಯ ಸರ್ಕಾರವೇ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವೂ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ವೇತನ ನೀಡಲೂ ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ದೆಹಲಿಗೆ ತೆರಳಿರುವುದು ರಾಜ್ಯದ ಹಿತಾಸಕ್ತಿಗಾಗಲಿ, ಬರ ಪರಿಹಾರಕ್ಕಾಗಲಿ ಅಥವಾ ಕಾವೇರಿ ವಿಚಾರಕ್ಕಾಗಲಿ ಅಲ್ಲ ಎಂದು ಆರ್. ಅಶೋಕ್ ಆರೋಪಿಸಿದರು.

Author

ANU News

Follow Me
Other Articles
Previous

K’taka LOP Ashok Demands CBI Probe into Alleged Veterinary Recruitment Scam

Next

BJP Questions Delay in Drought Declaration, Seeks Clarity from Karnataka Govt

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • BJP plotting to create social unrest, alleges Karnataka CM D K Shivakumar
    • DK Shivakumar to visit Thirthahalli, Balehonnur on Sept 19 amid Kasturirangan report protests
    • ಸೆ.19ಕ್ಕೆ ತೀರ್ಥಹಳ್ಳಿ, ಬಾಳೆಹೊನ್ನೂರಿಗೆ ಸಿಎಂ ಡಿಕೆಶಿ; ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿ ಹೋರಾಟಗಾರರೊಂದಿಗೆ ಸಂವಾದ
    • ಆಗಸ್ಟ್‌ನಲ್ಲಿ ರೈಲ್ವೆ ಇಲಾಖೆ ಸಾಧನೆ; ಸರಕು ಸಾಗಣೆ ಶೇ.5.4 ಏರಿಕೆ
    • Railways records 5.4% freight growth in August; 14 Amrit Bharat services regularised
    Copyright 2026 — ANU News. All rights reserved. Blogsy WordPress Theme